8477-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಸವಾರಿಯನ್ನು ಮುಂದುವರೆಸಿದ್ದು, ಇಂದು ಒಂದೇ ದಿನದಲ್ಲಿ 8,477 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7,43,848 ಕ್ಕೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿಯಲ್ಲಿ ಗುರುವಾರ ಅತಿ ಹೆಚ್ಚು ಅಂದರೆ 3,788 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 2,97,193 ಕ್ಕೆ ಏರಿಕೆಯಾದಂತಾಗಿದೆ. ಇದಲ್ಲದೆ ಬೆಂಗಳೂರಿನಲ್ಲಿ ಚೇತರಿಕೆ ಕಂಡುಬಂದವರ ಸಂಖ್ಯೆ 3,520 ಆಗಿದೆ.

ಇನ್ನು ರಾಜ್ಯದಲ್ಲಿ 8,841 ಜನರು ಇಂದು ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 1,13,538 ಮಂದಿ ಕೊರೋನಾಗೆ ಸಿಲುಕಿ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸೋಂಕು ಹರಡುವ ಪ್ರಮಾಣವು ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 7,43,848 ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನದಲ್ಲಿ 85 ಕೋವಿಡ್ – 19 ಮರಣಗಳು ಸಂಭವಿಸಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 45 ಸೋಂಕಿತರು ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 7,43,848 ಸೋಂಕಿತರ ಪೈಕಿ 6,20,008 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದೂ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಇನ್ನು, ಅಕ್ಟೋಬರ್ 15 ರಂದು ರಾಜ್ಯದಲ್ಲಿ 8,477 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 3788, ಬೆಂಗಳೂರು ಗ್ರಾಮಾಂತರ 454, ಹಾಸನ – 440, ಹಾಸನ 440, ಮೈಸೂರು 303, ಬೆಳಗಾವಿ 303, ದಕ್ಷಿಣ ಕನ್ನಡ 301, ಬಳ್ಳಾರಿ 282, ತುಮಕೂರು 252, ಚಿಕ್ಕಬಳ್ಳಾಪುರ 230, ಮಂಡ್ಯ 230, ಉಡುಪಿ 179, ಶಿವಮೊಗ್ಗ 169, ಧಾರವಾಡ 164, ವಿಜಯಪುರ 160, ಚಿತ್ರದುರ್ಗ 159, ಕೊಡಗು 158, ಬಾಗಲಕೋಟೆ 133, ದಾವಣಗೆರೆ 103, ಚಿಕ್ಕಮಗಳೂರು 92, ಚಾಮರಾಜನಗರ 85, ಕೋಲಾರ 81, ರಾಮನಗರ 79, ಕೊಪ್ಪಳ 76, ರಾಯಚೂರು 59, ಉತ್ತರ ಕನ್ನಡ 57, ಕಲಬುರಗಿ 42, ಹಾವೇರಿ 41, ಗದಗ 40, ಯಾದಗಿರಿ 7 ಸೋಂಕಿತರು ಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here