4764-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಇಂದೂ ಸಹ ಕೊರೊನಾ ಪ್ರಖರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದು, ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ 8,364 ಪ್ರಕರಣಗಳು ಕಂಡುಬಂದಿವೆ.

ಇಂದು ಬೆಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ 3,733 ಪ್ರಖರಣಗಳು ಪತ್ತೆಯಾಗಿವೆ. ಇದಲ್ಲದೇ 33 ಜನ ಸಾವನ್ನಪ್ಪಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆಯಾಗಿ ಇಂದು 114 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಸೋಂಕಿತರಂತೆಯೇ ಗುಣಮುಖರಾಗುತ್ತಿರುವವರು ಸಹ ಹೆಚ್ಚಿದ್ದು, 4,180 ಮಂದಿ ಇಂದು ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕಿಗೆ ಒಳಗಾದ ಒಟ್ಟು ಸೋಂಕಿತರ ಸಂಖ್ಯೆ 5,11,346 ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 4,04,841 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ 98,564 ಸಕ್ರೀಯ ಪ್ರಕರಣಗಳು ರಾಜ್ಯದಲ್ಲಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 3733, ಮೈಸೂರು 626, ದಕ್ಷಿಣ ಕನ್ನಡ 432, ಗದಗ 391, ಬಳ್ಳಾರಿ 300, ಧಾರವಾಡ 264, ಉಡುಪಿ 215, ಬೆಂಗಳೂರು ಗ್ರಾಮಾಂತರ 189, ಚಿಕ್ಕಮಗಳೂರು 165, ದಾವಣಗೆರೆ 163, ತುಮಕೂರು 159, ರಾಯಚೂರು 156,  ಬಾಗಲಕೋಟೆ 152, ಉತ್ತರ ಕನ್ನಡ 129, ಯಾದಗಿರಿ 127, ಕಲಬುರಗಿ 110, ಹಾವೇರಿ 107, ಶಿವಮೊಗ್ಗ 106, ಬೆಳಗಾವಿ 100, ಕೊಪ್ಪಳ 96, ಮಂಡ್ಯ 94, ಕೋಲಾರ 91, ಚಿಕ್ಕಬಳ್ಳಾಪುರ 89, ವಿಜಯಪುರ 87, ಚಿತ್ರದುರ್ಗ 84, ಚಾಮರಾಜನಗರ 72, ರಾಮನಗರ 47, ಕೊಡಗು 38, ಬೀದರ್ 23, ಹಾಸನ 19 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here