4169-new-covid-19-cases-reported-in-karnataka

ಬೆಂಗಳೂರು: ರರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೆಯೇ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ ಕೇವಲ 24 ಗಂಟೆಗಳಲ್ಲೇ 8,191 ಜನರಿಗೆ ಕೊರೊನಾವೈರಸ್ ಇರುವುದು ಪತ್ತೆಯಾಗಿದೆ.

ಇಂದು ರಾಜ್ಯದಲ್ಲಿ 8,611 ಜನರು ಗುಣಮುಕರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 4,13,452 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿದ್ದು, ಇಂದು ಒಂದೇ ದಿನ 101 ಜನರು ಕೊನೆಯುಸಿರೆಳೆದಿದ್ದಾರೆ ಎಂದು ಆರೋಗ್ಯ ಇಲಾಖ್ಯೆಯು ತಿಳಿಸಿದೆ.

ರಾಜ್ಯದಲ್ಲಿ ಒಟ್ಟು 8191 ಮಂದಿಗೆ ಇಂದು ಕೊರೊನಾವೈರಸ್ ಇರುವುದು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರು ನಗರ 3322, ಮೈಸೂರು 481, ದಕ್ಷಿಣ ಕನ್ನಡ 380, ಕೊಪ್ಪಳ 337, ಧಾರವಾಡ 305, ಉಡುಪಿ 295, ಶಿವಮೊಗ್ಗ 295, ಬಳ್ಳಾರಿ 298, ಹಾಸನ 277, ತುಮಕೂರು 244, ಬೆಂಗಳೂರು ಗ್ರಾಮಾಂತರ 179, ಮಂಡ್ಯ 165, ಬೆಳಗಾವಿ 151, ಕಲಬುರಗಿ 136, ರಾಯಚೂರು 132, ದಾವಣಗೆರೆ 130, ಚಿಕ್ಕಮಗಳೂರು 129, ಯಾದಗಿರಿ 116, ಉತ್ತರ ಕನ್ನಡ 108, ಕೋಲಾರ 105, ಬಾಗಲಕೋಟೆ 90, ಚಿಕ್ಕಬಳ್ಳಾಪುರ 81, ವಿಜಯಪುರ 81, ಬೀದರ್ 77, ಗದಗ 75, ಚಾಮರಾಜನಗರ 69, ರಾಮನಗರ 57, ಹಾವೇರಿ 44, ಕೊಡಗು 32 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here