8191-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಸ್ವಲ್ಪ ತಗ್ಗಿದ್ದು, ಇಂದು ಒಂದೇ ದಿನದಲ್ಲಿ 8,191 ಜನರಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಬೆಂಗಳೂರು ಮಹಾನಗರದಲ್ಲಿಯೂ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಇಂದು 3,776 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣವು ಏರಿಕೆಯಾಗಿದ್ದು, ಇಂದು 10421ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 6,02,505 ಜನರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೋವಿಡ್ ಸೋಂಕಿನಿಂದ 1,13,459 ಜನರು ಬಳಲುತ್ತಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಇಂದು ಕೋವಿಡ್ ನಿಂದ 87 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು 28 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 10,123 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿರಿ: ಯಡಿಯೂರಪ್ಪ ಸಂಧಾನ ಯಶಸ್ವಿ: ಯಾವುದೇ ಅಸಮಾಧಾನ ಇಲ್ಲ ಎಂದ ಶ್ರೀರಾಮಲು

ರಾಜ್ಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಜಿಲ್ಲಾವಾರು ಮಾಹಿತಿಯನ್ನು ನೋಡುತ್ತಾ ಸಾಗಿದರೆ, ಬೆಂಗಳೂರು ನಗರ 3776, ಮೈಸೂರು 416, ತುಮಕೂರು 391, ಬೆಳಗಾವಿ 358, ದಕ್ಷಿಣ ಕನ್ನಡ 314, ಚಿತ್ರದುರ್ಗ 242, ಹಾಸನ 238, ಚಿಕ್ಕಮಗಳೂರು 231, ಮಂಡ್ಯ 215, ಬೆಂಗಳೂರು ಗ್ರಾಮಾಂತರ 208, ಶಿವಮೊಗ್ಗ 170, ಉಡುಪಿ 168, ಧಾರವಾಡ 154, ಕೊಡಗು 151, ಚಿಕ್ಕಬಳ್ಳಾಪುರ 136, ಉತ್ತರ ಕನ್ನಡ 115, ಕಲಬುರಗಿ 114, ದಾವಣಗೆರೆ 106, ಕೋಲಾರ 101, ವಿಜಯಪುರ 87, ಬಾಗಲಕೋಟೆ 88, ಗದಗ 66, ಚಾಮರಾಜನಗರ 61, ರಾಮನಗರ 59, ಯಾದಗಿರಿ 53, ಹಾವೇರಿ 39, ಬಳ್ಳಾರಿ 38, ಕೊಪ್ಪಳ 37, ರಾಯಚೂರು- 36, ಬೀದರ್ 23 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here