ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಗದ್ದೆಯ ಬದಿಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದ ಘಟನೆ ಡಿಸೆಂಬರ್ 6 ರಂದು ನಡೆದಿದೆ.
ಮಂಗಳವಾರ ಸಂಜೆ 5 ಘಂಟೆ ಸುಮಾರಿಗೆ ಗದ್ದೆಯಲ್ಲಿ ಆಡುತ್ತಿದ್ದ ತನ್ಮಯ್ ದಿಯಾವರ್ ಇತ್ತೀಚೆಗಷ್ಟೇ ಕೊರೆಸಲಾಗಿದ್ದ 400 ಅಡಿಗಳಷ್ಟು ಆಳವಿರುವ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ಮಾಹಿತಿ ತಿಳಿದುಬಂದಿದೆ.
ಬಾಲಕ ಕೊಳವೆ ಬಾವಿಯಲ್ಲಿ 60 ಅಡಿಗಳಷ್ಟು ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಆತ ಬಿದ್ದಿರುವ ಬಾವಿಗೆ ಆಮ್ಲಜನಕದ ಪೂರೈಕೆ ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಾಲಕನನ್ನು ಹೊರತರಲು ಮಣ್ಣು ಅಗೆಯುವ ಕಾರ್ಯವು ನಡೆಯುತ್ತಿದೆ.
ಇದನ್ನೂ ಓದಿರಿ: ಸ್ಕ್ಯಾನಿಂಗ್ ಸೆಂಟರ್ ಮಾಡಿದ ಮಹಾ ಯಡವಟ್ಟಿಗೆ ಗ್ರಾಹಕ ನ್ಯಾಯಾಲಯ ವಿಧಿಸಿತು 15 ಲಕ್ಷ ರೂ ದಂಡ !