ಶ್ರೀನಗರ: ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿನಡೆಸಿದ ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸಿ ಭಾರತೀಯ ಸೇನೆಯು ಏಳರಿಂದ ಎಂಟು ಪಾಕ್ ಸೈನಿಕರನ್ನು ಹೊಡೆದುರುಳಿಸಿದ್ದಾರೆ.
ಭಾರತೀಯ ಗಡಿಯನ್ನು ಅಕ್ರಮ ಪ್ರವೇಶಿಸುತ್ತಿರುವವರನ್ನು ತಡೆಯಲು ಹೋದ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿ, ಪಾಕ್ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಎದುರೇಟು ನೀಡಿರುವ ಭಾರತೀಯ ಸೇನೆ, 7-8 ಪಾಕ್ ಸೇನೆಯ ಏನ್ ಎಸ್ ಜಿ ಯೋಧರನ್ನು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನದ ಬಂಕರ್ ಗಳು, ಅಪಾರ ಪ್ರಮಾಣದ ಇಂಧನ ಹಾಗೂ ಅಡಗು ದಾನಗಳು ನಾಶವಾಗಿದೆ. ಈ ಘಟನೆಯಲ್ಲಿ 10-12 ಪಾಕ್ ಯೋಧರು ಗಾಯಗೊಂಡಿರುವ ಶಂಕೆಯನ್ನು ಭಾರತೀಯ ಮೂಲಗಳು ತಿಳಿಸಿವೆ.
ಈ ಘಟನೆಯ ವಿಡಿಯೋ ಚಿತ್ರಣವು ದೊರೆತಿದ್ದು, ಅದರಲ್ಲಿ ಬಂಕರೊಂದು ದಾಳಿಗೆ ತುತ್ತಾಗಿ ಛಿದ್ರ ಛಿದ್ರವಾಗುತ್ತಿರುವುದು ಕಂಡುಬರುತ್ತಿದೆ. ಭಾರತೀಯ ಸೇನೆಯು ತನ್ನ ಸೇಡನ್ನು ಈ ರೀತಿಯಲ್ಲಿ ತೀರಿಸಿಕೊಳ್ಳುವ ಮೂಲಕ ವೀರ ಮರಣವನ್ನಪ್ಪಿದ ತನ್ನ ಸೈನಿಕರಿಗೆ ಶೃದ್ಧಾಂಜಲಿ ಅರ್ಪಿಸಿದೆ.
#WATCH | 7-8 Pakistan Army soldiers killed, 10-12 injured in the retaliatory firing by Indian Army in which a large number of Pakistan Army bunkers, fuel dumps, and launch pads have also been destroyed: Indian Army Sources pic.twitter.com/q3xoQ8F4tD
— ANI (@ANI) November 13, 2020