ಒಂದರ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೀರೊ ಚಿತ್ರದ ಬಳಿಕ “777 ಚಾರ್ಲಿ” ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಪ್ರಮುಖ ಭಾಗಗಳು ಚಿತ್ರೀಕರಣಗೊಂಡಿದ್ದು, ಇನ್ನೇನು ಕೆಲವೇದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.
ರಕ್ಷಿತ್ ಶೆಟ್ಟಿ ಮತ್ತು ಜಿ ಎಸ್ ಗುಪ್ತ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಿರಣ ರಾಜ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟನೆ ಮಾಡಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ನಟ ರಾಜ್ ಬಿ ಶೆಟ್ಟಿ, ಡ್ಯಾನಿಶ್ ಶೇಟ್ ಸೇರಿದಂತೆ ಹಲವಾರು ತಾರಾಬಳಗ ಚಿತ್ರದಲ್ಲಿ ತೊಡಗಿಕೊಂಡಿದೆ.
ಸದ್ಯ 777 ಚಾರ್ಲಿ ಚಿತ್ರ ನಿರ್ಮಾಣ ಹಂತದಲ್ಲಿದ್ದು, ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ಇದಲ್ಲದೇ ಸೆಪ್ಟೆಂಬರ್ ವೇಳೆಗೆ ತೆರೆಗೆ ಬರಲಿದೆ ಎಂದು ಅಭಿಮಾನಿಗಳಿಗೆ ತಿಳಿಸಿದೆ. ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಕೊರೋನಾ ಸಂಕಷ್ಟ ಮುಗಿಯುತ್ತಿದ್ದಂತೆ ಚಿತ್ರಮಂದಿರಗಳಿಗೆ ತೆರಳಲು ಕಾಯುತ್ತಿದ್ದಾರೆ.