4537-new-covid-19-cases-reported-in-karnataka

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಸೋಂಕು ಒಂದೇ ಸಮನೆ ಜನರನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದ್ದು, ಇಂದು ರಾಜ್ಯದಲ್ಲಿ 7,576 ಜನರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಈ ಸೋಂಕಿನಿಂದಾಗಿ 97 ಜನರು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಹವಾ ಜೋರಾಗಿಯೇ ಇದ್ದು, ಇಂದು 24 ಗಂಟೆಗಳಲ್ಲಿ 3,084 ಪಾಸಿಟಿವ್ ಪ್ರಖರಣಗಳು ದಾಖಲಾಗಿವೆ. ಇದಲ್ಲದೇ 41 ಜನರು ಈ ಸೋಂಕಿಗೆ ತಮ್ಮ ಪ್ರಾಣ ಚೆಲ್ಲಿದ್ದಾರೆ. ಬೆಂಗಳೂರಿನಲ್ಲಿ ಚೇತರಿಕೆಯ ಪ್ರಖರಣಗಳೂ ಉತ್ತಮವಾಗಿದ್ದು, ಇಂದು ಒಂದೇ ದಿನದಲ್ಲಿ 3,889 ಜನರು ಗುಣಮುಖರಾಗಿದ್ದಾರೆ. ಇನ್ನುಳಿದಂತೆ 39,681 ಪ್ರಖರಣಗಳು ಚಾಲ್ತಿಯಲ್ಲಿದ್ದು, ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಳವಾಗಿದ್ದು, ಇಂದು 7,406 ಜನರು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ರಾಜ್ಯದ ಸಕ್ರೀಯ ಪ್ರಖರಣಗಳ ಸಂಖ್ಯೆ 98,536 ಇದ್ದು, ಪೂರಕ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿರಿ: ಅನಂತ್ ಕುಮಾರ್ ಹೆಗಡೆ ಸೇರಿದಂತೆ 17 ಸಂಸದರಿಗೆ ಕೊರೋನಾ ಪಾಸಿಟಿವ್ !

LEAVE A REPLY

Please enter your comment!
Please enter your name here