7542-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಸವಾರಿಯನ್ನು ಮುಂದುವರೆಸಿದ್ದು, ಇಂದು ಒಂದೇ ದಿನದಲ್ಲಿ 7,542 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7,51,390 ಕ್ಕೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿಯಲ್ಲಿ ಶುಕ್ರವಾರ ಅತಿ ಹೆಚ್ಚು ಅಂದರೆ 3,441 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 3,00,634 ಕ್ಕೆ ಏರಿಕೆಯಾದಂತಾಗಿದೆ. ಇದಲ್ಲದೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಚೇತರಿಕೆ ಕಂಡುಬಂದವರ ಸಂಖ್ಯೆ 2,31,483 ಆಗಿದೆ.

ಇನ್ನು ರಾಜ್ಯದಲ್ಲಿ 8,580 ಜನರು ಇಂದು ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 1,12,427 ಮಂದಿ ಕೊರೋನಾಗೆ ಸಿಲುಕಿ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸೋಂಕು ಹರಡುವ ಪ್ರಮಾಣವು ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 7,51,390 ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನದಲ್ಲಿ 73 ಕೋವಿಡ್–19 ಮರಣಗಳು ಸಂಭವಿಸಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 24 ಸೋಂಕಿತರು ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 7,51,390 ಸೋಂಕಿತರ ಪೈಕಿ 6,28,588 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದೂ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಇನ್ನು, ಅಕ್ಟೋಬರ್ 15 ರಂದು ರಾಜ್ಯದಲ್ಲಿ 7,542 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 3,441, ಮೈಸೂರು 404, ಬೆಂಗಳೂರು ಗ್ರಾಮಾಂತರ 345, ಬೆಳಗಾವಿ 289, ದಾವಣಗೆರೆ 280, ಚಿಕ್ಕಬಳ್ಳಾಪುರ 270, ಮಂಡ್ಯ 246, ದಕ್ಷಿಣ ಕನ್ನಡ 220, ಉಡುಪಿ 211, ಹಾಸನ 195, ಬಳ್ಳಾರಿ 174, ತುಮಕೂರು 173, ಶಿವಮೊಗ್ಗ 136, ಧಾರವಾಡ 121, ಉತ್ತರ ಕನ್ನಡ 111, ಕೊಡಗು 105, ಚಿಕ್ಕಮಗಳೂರು 101, ಚಿತ್ರದುರ್ಗ 95, ಬಾಗಲಕೋಟೆ 76, ರಾಮನಗರ 75, ವಿಜಯಪುರ 73, ಕೋಲಾರ 69, ಕಲಬುರಗಿ 66, ಚಾಮರಾಜನಗರ 62, ಗದಗ 45, ಕೊಪ್ಪಳ 41, ರಾಯಚೂರು 38, ಯಾದಗಿರಿ 34, ಹಾವೇರಿ 32, ಬೀದರ್ 14 ಸೋಂಕಿತರು ಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here