5007-new-covid-19-cases-reported-in-karnataka-

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇಂದು ಒಂದೇ ದಿನದಲ್ಲಿ 7,339 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ 122 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 2,886 ಜನರು ಸೋಂಕಿಗೆ ಒಳಗಾಗಿದ್ದರೆ, 3,536 ಜನರು ಗುಣಮುಕರಾಗಿದ್ದಾರೆ. ಆದರೆ ಇಂದು ಒಂದೇ ದಿನದಲ್ಲಿ ಸೋಂಕಿಗೆ ಬೆಂಗಳೂರು ಒಂದರಲ್ಲೇ 32 ಜನರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆಯಾಗಿ 9,925 ಜನರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಇನ್ನೂ 95,335 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ 7,339 ಪ್ರಕರಣಗಳು ದಾಕಲಾಗಿದ್ದರೆ, ಅತೀ ಹೆಚ್ಚು ಪ್ರಕರಣ ಪತ್ತೆಯಾದ ಜಿಲ್ಲೆಗಳು ಇಂತಿವೆ. ಬೆಂಗಳೂರು ನಗರ 2886, ಮೈಸೂರು 524, ಶಿವಮೊಗ್ಗ 348, ದಕ್ಷಿಣ ಕನ್ನಡ 233, ಚಿತ್ರದುರ್ಗ 326, ತುಮಕೂರು 300 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here