8477-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಸವಾರಿಯನ್ನು ಮುಂದುವರೆಸಿದ್ದು, ಇಂದು ಒಂದೇ ದಿನದಲ್ಲಿ 7,012 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7,65,586 ಕ್ಕೆ ಏರಿಕೆಯಾಗಿದೆ.

ರಾಜ್ಯ ರಾಜಧಾನಿಯಲ್ಲಿ ಶುಕ್ರವಾರ ಅತಿ ಹೆಚ್ಚು ಅಂದರೆ 3,535 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 3,07,540 ಕ್ಕೆ ಏರಿಕೆಯಾದಂತಾಗಿದೆ. ಇದಲ್ಲದೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಚೇತರಿಕೆ ಕಂಡುಬಂದವರ ಸಂಖ್ಯೆ 2,39,579 ಆಗಿದೆ.

ಇನ್ನು ರಾಜ್ಯದಲ್ಲಿ 8,344 ಜನರು ಇಂದು ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 1,09,264 ಮಂದಿ ಕೊರೋನಾಗೆ ಸಿಲುಕಿ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸೋಂಕು ಹರಡುವ ಪ್ರಮಾಣವು ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 7,65,586 ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನದಲ್ಲಿ 51 ಕೋವಿಡ್–19 ಮರಣಗಳು ಸಂಭವಿಸಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 25 ಸೋಂಕಿತರು ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 3,525 ಕ್ಕೆ ಏರಿಕೆಯಾಗಿದೆ.

ಇನ್ನು, ಅಕ್ಟೋಬರ್ 18 ರಂದು ರಾಜ್ಯದಲ್ಲಿ 7,012 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 3,535, ಮೈಸೂರು 404, ಬೆಂಗಳೂರು ಗ್ರಾಮಾಂತರ 288, ಮಂಡ್ಯ 308, ಹಾಸನ 257, ಚಿತ್ರದುರ್ಗ 226, ದಕ್ಷಿಣ ಕನ್ನಡ 183, ಬಳ್ಳಾರಿ 171, ಬಾಗಲಕೋಟೆ 138, ಧಾರವಾಡ 135, ಉಡುಪಿ 129, ಚಿಕ್ಕಮಗಳೂರು 119, ಶಿವಮೊಗ್ಗ 103, ತುಮಕೂರು 99, ವಿಜಯಪುರ 95, ಉತ್ತರ ಕನ್ನಡ 92, ಚಿಕ್ಕಬಳ್ಳಾಪುರ 86, ದಾವಣಗೆರೆ 84, ಕೊಡಗು 72, ಬೆಳಗಾವಿ 71, ಕೋಲಾರ 71, ಕಲಬುರಗಿ 67, ಚಾಮರಾಜನಗರ 60, ಗದಗ 53, ರಾಯಚೂರು 44, ಕೊಪ್ಪಳ 35, ರಾಮನಗರ 32, ಯಾದಗಿರಿ 24, ಹಾವೇರಿ 24, ಬೀದರ್ 7 ಸೋಂಕಿತರು ಪತ್ತೆಯಾಗಿದ್ದಾರೆ.

LEAVE A REPLY

Please enter your comment!
Please enter your name here