70-80-lakhs-for-a-police-post-thats-not-my-statement-says-mtb-nagaraj

ಬೆಂಗಳೂರು: ‘ಪೊಲೀಸ್ ಹುದ್ದೆ ನೇಮಕಾತಿಗೆ 70-80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ?’ ಎಂಬ ಹೇಳಿಕೆಯನ್ನು ನೀಡಿರುವ ಎಂಟಿಬಿ ನಾಗರಾಜ್ ಇಂದು ಉಲ್ಟಾ ಹೊಡೆದಿದ್ದಾರೆ. ಈ ಹೇಳಿಕೆ ನನ್ನದಲ್ಲ, ಯಾರೋ ನನಗೆ ಹೇಳಿದ್ದನ್ನ ಹೇಳುತ್ತಾ ಹೋಗಿದ್ದೇನೆ. ಅದನ್ನೇ ಯಾರೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ ಎಂದು ಎಂಟಿಬಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದೀಶ್ ಸಾವನ್ನಪ್ಪಿರುವ ಕುರಿತು ಇನ್ಸ್ ಪೆಕ್ಟರ್ ಮಾಹಿತಿ ನೀಡಿದರು. ಅಲ್ಲಿಗೆ ತೆರಳಿದಾಗ ಕಾರ್ಯಕರ್ತರು 70-80 ಲಕ್ಷ ಕೊಟ್ಟು ಪೋಸ್ಟಿಂಗ್‌ಗೆ ಬಂದಿದ್ದ, ಈಗ ಹೃದಯಾಘಾತ ಆಗಿದೆ ಅಂತಾ ಹೇಳ್ತಿದ್ರು. ನಾನು 70-80 ಲಕ್ಷ ಕೊಟ್ಟು ಬಾಯಿಬಡಿದುಕೊಳ್ಳಲು ಬಂದಿದ್ನಾ? ಅಂತ ಕೇಳಿದ್ದೆ ಅಷ್ಟೇ ಹೊರತು, ಹಣ ಕೊಟ್ಟು ಬಂದಿದ್ದಾನೆ ಅಂತ ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಶೀಘ್ರವೇ ನಂದಿನಿ ಹಾಲಿನ ದರದಲ್ಲಿ 3 ರೂ. ಹೆಚ್ಚಳ: ಗ್ರಾಹಕರಿಗೆ ಮತ್ತೊಂದು ಬರೆ

ರಾಜೀನಾಮೆ ಕೊಡುವಂತಹ ಕೆಲಸ ನಾವು ಮಾಡಿಲ್ಲ, ಹಣ ತೆಗೆದುಕೊಂಡಿರೋದ್ರ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸಾಕ್ಷಿ ಒದಗಿಸಲಿ ಎಂದು ಹೇಳಿದ್ದಾರೆ. ಒಬ್ಬ ಇನ್ಸ್ಪೆಕ್ಟರ್ ಆಗಿರೋನು ತಾಲ್ಲೂಕಲ್ಲಿ 70 ರಿಂದ 80 ಲಕ್ಷ ಕೊಟ್ಟು ಕೆಲಸ ಮಾಡಲು ಆಗುತ್ತಾ? ಅಂತಾ ಯಾರೋ ಹೇಳಿರೋದನ್ನಷ್ಟೇ ನಾನು ಹೇಳಿಕೊಂಡು ಹೋದೆ. ಇದಕ್ಕೆ ರಾಜೀನಾಮೆ ಕೊಡಬೇಕಾ? ಯಾವುದೇ ತನಿಖೆಗೂ ಸಿದ್ದ, ವಾರ ಬಳಿಯಲ್ಲಿ ಹಣ ಪಡೆದ ಬಗ್ಗೆ ಸಾಕ್ಷಿಗಳಿದ್ದರೆ ನೀಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಭಾರತದಲ್ಲಿ ಟು ಫಿಂಗರ್ ಟೆಸ್ಟ್ ನಿಷೇಧ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here