2116-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕರೋನಾ ಎರಡನೆಯ ಅಲೆಯು ಜೋರಾಗಿಯೇ ಪ್ರಾರಂಭವಾಗಿದ್ದು, ಇಂದು ಒಂದೇ ದಿನದಲ್ಲಿ 6,976 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 10,33,560 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 12,731 ಕ್ಕೆ ತಲುಪಿದೆ. ಇಂದು ಒಂದೇ ದಿನದಲ್ಲಿ 6,976 ಪ್ರಕರಣಗಳು ದಾಖಲಾಗಿದ್ದು, 35 ಜನರು ಸಾವಿಗೆ ಶರಣಾಗಿದ್ದಾರೆ. ಎರಡನೆ ಅಲೆಯು ಜೋರಾಗಿಯೇ ಸಾಗುತ್ತಿದ್ದು, ಬೆಂಗಳೂರು ಒಂದರಲ್ಲಿಯೇ 4,991 ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಜಿಲ್ಲಾವಾರು ಮಾಹಿತಿಯನ್ನು ನೋಡುತ್ತಾ ಸಾಗಿದರೆ, ಬಾಗಲಕೋಟೆ 13, ಬಳ್ಳಾರಿ 49, ಬೆಳಗಾವಿ 101, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು ನಗರ 4991, ಬೀದರ್ 214, ಚಾಮರಾಜನಗರ 39, ಚಿಕ್ಕಬಳ್ಳಾಪುರ 37, ಚಿಕ್ಕಮಗಳೂರು 38, ಚಿತ್ರದುರ್ಗ 20, ದಕ್ಷಿಣ ಕನ್ನಡ 112, ದಾವಣಗೆರೆ 20, ಧಾರವಾಡ 88, ಗದಗ 11, ಹಾಸನ 90, ಹಾವೇರಿ 12, ಕಲಬುರಗಿ 205, ಕೊಡಗು 10, ಕೋಲಾರ 29, ಕೊಪ್ಪಳ 24, ಮಂಡ್ಯ 58, ಮೈಸೂರು 243, ರಾಯಚೂರು 28, ರಾಮನಗರ 28, ಶಿವಮೊಗ್ಗ 34, ತುಮಕೂರು 204, ಉಡುಪಿ 89, ಉತ್ತರ ಕನ್ನಡ 35, ವಿಜಯಪುರ 50, ಯಾದಗಿರಿ 34 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here