5324-new-cases-found-in-karnataka

ಬೆಂಗಳೂರು:  ರಾಜ್ಯದಲ್ಲಿ ಕರೋನಾ ಮಹಾಮಾರಿ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ರಾಜ್ಯದಲ್ಲಿ ಇಂದು 6974 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 24 ಗಂಟೆಗಳಲ್ಲಿ 3082 ಜನರಿಗೆ ಸೋಂಕು ಪತ್ತೆಯಾಗಿದ್ದು, 26 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು 9073 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ 93,153  ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದಲ್ಲದೇ ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ 83 ಜನರು ಸಾವನ್ನಪ್ಪಿದ್ದಾರೆ.

ಇಂದು ದಾಖಲಾದ ಹೊಸ 6974 ಪ್ರಕರಣಗಳಲ್ಲಿ ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುತ್ತಾ ಹೋಗುವುದಾದರೆ ಬೆಂಗಳೂರು ನಗರ 3,082, ಮೈಸೂರು  443, ತುಮಕೂರು  240,  ಹಾಸನ 235, ಶಿವಮೊಗ್ಗ 234, ದಕ್ಷಿಣ ಕನ್ನಡ 211, ದಾವಣಗೆರೆ 198, ಬಳ್ಳಾರಿ 181,ಕೊಪ್ಪಳ 180,ಬೆಳಗಾವಿ 179,ಕಲಬುರಗಿ 168, ಉತ್ತರಕನ್ನಡ 155, ಗದಗ 134, ಮಂಡ್ಯ 134, ಚಿತ್ರದುರ್ಗ 122, ಹಾವೇರಿ 115, ರಾಯಚೂರು 115,ಉಡುಪಿ 106, ಬೆಂಗಳೂರು ಗ್ರಾಮಾಂತರ 80, ವಿಜಯಪುರ 80, ಬಾಗಲಕೋಟೆ 77,ಚಿಕ್ಕಮಗಳೂರು 77, ಕೊಡಗು 73,ಚಿಕ್ಕಬಳ್ಳಾಪುರ 71, ಚಾಮರಾಜನಗರ 57,ಯಾದಗಿರಿ 55, ಕೋಲಾರ 52, ಬೀದರ್ 50, ಧಾರವಾಡ 37, ರಾಮನಗರ 33 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here