ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಇಂದು 6,892 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,82,458 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಒಂದರಲ್ಲೇ ಅತಿಹೆಚ್ಚು ಅಂದರೆ 2,722 ಜನರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದಲ್ಲದೆ ಬೆಂಗಳೂರಿನಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಂದು 7509 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 4,69,750 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಂತಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 59 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 8,641 ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ 6892 ಹೊಸ ಪ್ರಕರಣಗಳಲ್ಲಿ ಜಿಲ್ಲಾವಾರು ಸಂಖ್ಯೆಯನ್ನು ನೋಡುತ್ತಾ ಹೋಗುವುದಾದರೆ ಬೆಂಗಳೂರಿನಲ್ಲಿ 2,722, ಉಡುಪಿ 332, ಹಾಸನ 320, ಕಲಬುರಗಿ 273, ಮೈಸೂರು 240, ಚಿಕ್ಕಮಗಳೂರು 219, ದಕ್ಷಿಣ ಕನ್ನಡ 217, ಮಂಡ್ಯ 209, ಬಾಗಲಕೋಟೆ 191, ತುಮಕೂರು 187, ಶಿವಮೊಗ್ಗ 181, ಚಿತ್ರದುರ್ಗ 176, ಉತ್ತರ ಕನ್ನಡ 176, ಬಳ್ಳಾರಿ 164, ಧಾರವಾಡ 145, ವಿಜಯಪುರ 117, ಬೆಂಗಳೂರು ಗ್ರಾಮಾಂತರ 110, ದಾವಣಗೆರೆ 107, ಚಿಕ್ಕಬಳ್ಳಾಪುರ 106, ಕೊಲಾರ 90, ಹಾವೇರಿ 83, ಬೆಳಗಾವಿ 78, ಯಾದಗಿರಿ 82, ರಾಮನಗರ 75, ಚಾಮರಾಜನಗರ 64, ಗದಗ 61, ರಾಯಚೂರು 52, ಕೊಪ್ಪಳ 45, ಬೀದರ್ 45, ಕೊಡಗು 25 ಪ್ರಕರಣಗಳು ದಾಖಲಾಗಿವೆ.
Today’s Media Bulletin 28/09/2020.
Please click on the link below to view bulletin.@readingkafka @IasAlok @DeccanHerald @anusharavi10 @D_Roopa_IPS @iaspankajpandey @Tejasvi_Surya @BBMP_MAYOR @BBMPCOMM @mla_sudhakar @RAshokaBJP @Ratnaprabha_IAShttps://t.co/RWsYq0wtLW pic.twitter.com/TrhuDzN2op— K’taka Health Dept (@DHFWKA) September 28, 2020