ಕೋವಿಡ್-19: ಬೆಂಗಳೂರಿನಲ್ಲಿ 1470 ಸೇರಿ ರಾಜ್ಯದಲ್ಲಿಂದು 6835 ಹೊಸ ಪ್ರಕರಣ ಪತ್ತೆ

6835-new-cases-reported-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗಿದ್ದು, ಇಂದು 6835 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿನ ಸಂಖ್ಯೆ 27,71,969 ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ರಾಜ್ಯದಲ್ಲಿ 15,409 ಜನರು ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 1470 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಅಲ್ಲದೆ ಇಂದು 12 ಜನರು ಸಾವಿಗೀಡಾಗಿದ್ದಾರೆ. ಇದರೊಂದಿಗೆ 2409 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಂದು 120 ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 33,033 ಕ್ಕೆ ಏರಿಕೆಯನ್ನು ಕಂಡಿದೆ. ಇದಲ್ಲದೇ  ರಾಜ್ಯದಲ್ಲಿ 1,72,141 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ ಮಾಹಿತಿ ನೀಡಿದೆ.

ಇದನ್ನೂ ಓದಿರಿ: Flipkart Big Savings Day Sale: ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದರೆ ಇದು ರೈಟ್ ಟೈಮ್

ಜಿಲ್ಲಾವಾರು ಕೋವಿಡ್ ಸೋಂಕಿತರ ಸಂಖ್ಯೆ :

ಬಾಗಲಕೋಟೆ 57, ಬಳ್ಳಾರಿ 203, ಬೆಳಗಾವಿ 191, ಬೆಂಗಳೂರು ಗ್ರಾಮಾಂತರ 168, ಬೆಂಗಳೂರು ನಗರ 1470, ಬೀದರ್ 14, ಚಾಮರಾಜನಗರ 119, ಚಿಕ್ಕಬಳ್ಳಾಪುರ 160, ಚಿಕ್ಕಮಗಳೂರು 185, ಚಿತ್ರದುರ್ಗ 195, ದಕ್ಷಿಣ ಕನ್ನಡ 648, ದಾವಣಗೆರೆ 200, ಧಾರವಾಡ 103, ಗದಗ 28, ಹಾಸನ 507, ಹಾವೇರಿ 63, ಕಲಬುರಗಿ 31, ಕೊಡಗು 110, ಕೋಲಾರ 115, ಕೊಪ್ಪಳ 95, ಮಂಡ್ಯ 256, ಮೈಸೂರು 670, ರಾಯಚೂರು 33, ರಾಮನಗರ 26, ಶಿವಮೊಗ್ಗ 353, ತುಮಕೂರು 386, ಉಡುಪಿ 122, ಉತ್ತರ ಕನ್ನಡ 204, ವಿಜಯಪುರ 103, ಯಾದಗಿರಿ 20 ಪ್ರಕರಣಗಳು ಪತ್ತೆಯಾಗಿದೆ.

ಇದನ್ನೂ ಓದಿರಿ: ಬಿಪಿಎಲ್ ಕಾರ್ಡ್ ಹೊಂದಿರುವ ಕೋವಿಡ್ ನಿಂದ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ !

LEAVE A REPLY

Please enter your comment!
Please enter your name here