6297-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಅಬ್ಬರ ಕೊಂಚ ಕಡಿಮೆಯಾಗಿದ್ದು, 6,297 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಚೇತರಿಕೆಯ ಪ್ರಮಾಣವೂ ಹೆಚ್ಚಿದ್ದು, ರಾಜ್ಯದ ಜನತೆಗೆ ಸಂತೋಷದ ಸಮಾಚಾರವಾಗಿದೆ.

ಇಂದು ರಾಜ್ಯದಲ್ಲಿ 8,500 ಜನರು ಗುಣಮುಖರಾಗಿದ್ದು, ರಾಜ್ಯದಲ್ಲಿ ಇಲ್ಲಿಯವರೆಗೆ 6,62,329 ಜನರು ಸೋಂಕನ್ನು ಮೆಟ್ಟಿ ನಿಂತಿದ್ದಾರೆ. ಇದಲ್ಲದೇ ರಾಜ್ಯದಲ್ಲಿ 1,03,945 ಸಕ್ರೀಯ ಪ್ರಕರಣಗಳಿದ್ದು ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ರಾಜ್ಯದ ರಾಜಧಾನಿ ಬೆಂಗಳೂರುನಲ್ಲಿ ಇಂದು 2,821 ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ ಕೋವಿಡ್ ಸೋಂಕಿನ ತೀವ್ರತೆಗೆ ಸಿಲುಕಿ 36 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಸಮಾಧಾನಕರ ವಿಚಾರವೆಂದರೆ ಬೆಂಗಳೂರಿನಲ್ಲಿ 2,798 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಂದು ಕೋವಿಡ್ ಸೋಂಕಿಗೆ ಬಲಿಯಾಗಿ ತಮ್ಮ ಕೊನೆಯ ಉಸಿರನ್ನು 66 ಜನರು ಕಳೆದುಕೊಂಡಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ 10,608 ಕೋವಿಡ್ ಮರಣಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

LEAVE A REPLY

Please enter your comment!
Please enter your name here