5324-new-cases-found-in-karnataka

ಬೆಂಗಳೂರು(ಜು.27): ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು 5324 ಪ್ರಖರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವೆರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 1,01,465 ಕ್ಕೆ ತಲುಪಿದೆ. ಇದರೊಂದಿಗೆ  ಕೋವಿಡ್-19 ರ ಸೋಂಕಿನಿಂದ 75 ಜನರು ಇಂದು ಸಾವನ್ನಪ್ಪಿದ್ದು, ಆತಂಕವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ.

ರಾಜ್ಯದಲ್ಲಿ ಇಂದು 75 ಜನರು ಸಾವನ್ನಪ್ಪಿದ್ದು, ರಾಜ್ಯದ ಇಲ್ಲಿಯವೆರೆಗಿನ ಸಾವಿನ ಸಂಖ್ಯೆ 1,953 ಕ್ಕೆ ಏರಿಕೆಯಾದಂತಾಗಿದೆ. ಬೆಂಗಳೂರು ಒಂದರಲ್ಲೇ 26 ಜನರು ಬಲಿಯಾಗಿದ್ದಾರೆ.

ಈ ನಡುವೆ, ರಾಜ್ಯದಲ್ಲಿ ಇಂದು 1847 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 37,685. ಇನ್ನು ಸೋಂಕಿನಿಂದ ಬಳಲುತ್ತಿರುವ 61,819 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿರಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಕೊರೊನಾ ಪ್ರಕರಣಗಳೆಷ್ಟು ಗೊತ್ತೇ ?

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆ ನೋಡುತ್ತಾ ಹೋದರೆ, ಬೆಂಗಳೂರು ನಗರ 1470, ಬಳ್ಳಾರಿ 840, ಕಲಬುರಗಿ 631, ಮೈಸೂರು 296, ಉಡುಪಿ 225, ಧಾರವಾಡ 193, ಬೆಳಗಾವಿ 155, ಕೋಲಾರ 142, ಬೆಂಗಳೂರು ಗ್ರಾಮಾಂತರ 138, ರಾಯಚೂರು120, ದಕ್ಷಿಣ ಕನ್ನಡ 119, ವಿಜಯಪುರ 110, ದಾವಣಗೆರೆ 110, ತುಮಕೂರು 89, ಶಿವಮೊಗ್ಗ 76, ಹಾಸನ  66, ಯಾದಗಿರಿ 64, ಗದಗ 63, ರಾಮನಗರ 62, ಮಂಡ್ಯ 56, ಚಿತ್ರದುರ್ಗ 51, ಬೀದರ್ 42, ಚಿಕ್ಕಬಳ್ಳಾಪುರ 40,        ಉತ್ತರ ಕನ್ನಡ 32, ಕೊಪ್ಪಳ 28, ಬಾಗಲಕೋಟೆ 27,  ಹಾವೇರಿ 27, ಚಿಕ್ಕಮಗಳೂರು 26, ಚಾಮರಾಜನಗರ 16, ಕೊಡಗು10 ಪ್ರಕರಣಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here