5007-new-covid-19-cases-reported-in-karnataka-

ಬೆಂಗಳೂರು (ಜು. 24): ರಾಜ್ಯದಲ್ಲಿ ಇಂದು ದಾಖಲೆಯ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು, ಒಂದೇ ದಿನದಲ್ಲಿ 5007 ಮಂದಿಗೆ ಪಾಸಿಟಿವ್ ಬಂದಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 2267 ಪ್ರಖರಣಗಳು ಬೆಳಕಿಗೆ ಬಂದಿವೆ.

ಇಂದು ಒಂದೇ ದಿನದಲ್ಲಿ 2037 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟು ರಾಜ್ಯದಲ್ಲಿ ಇಲ್ಲಿಯವೆರೆಗೆ ಗುನಮುಖರಾದವರ ಸಂಖ್ಯೆ 31347.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆ ನೋಡುತ್ತಾ ಹೋದರೆ, ಬೆಂಗಳೂರು ನಗರದಲ್ಲಿ 2267, ಮೈಸೂರಿನಲ್ಲಿ 281, ಉಡುಪಿಯಲ್ಲಿ 190, ಬಾಗಲಕೋಟೆಯಲ್ಲಿ 184, ದಕ್ಷಿಣ ಕನ್ನಡದಲ್ಲಿ 180, ಧಾರವಾಡದಲ್ಲಿ 174, ಕಲಬುರಗಿಯಲ್ಲಿ 159, ವಿಜಯಪುರದಲ್ಲಿ 158,ಬಳ್ಳಾರಿಯಲ್ಲಿ 136, ಹಾಸನದಲ್ಲಿ 118, ಬೆಳಗಾವಿಯಲ್ಲಿ 116, ಗದಗದಲ್ಲಿ 108, ರಾಯಚೂರಿನಲ್ಲಿ 107, ಚಿಕ್ಕಬಳ್ಳಾಪುರದಲ್ಲಿ 92, ಉತ್ತರಕನ್ನಡದಲ್ಲಿ 88, ಬೀದರ್‌ನಲ್ಲಿ 87, ದಾವಣಗೆರೆಯಲ್ಲಿ 77, ಶಿವಮೊಗ್ಗ 67, ತುಮಕೂರು 59, ಹಾವೇರಿಯಲ್ಲಿ 59, ಮಂಡ್ಯದಲ್ಲಿ 57, ಯಾದಗಿರಿಯಲ್ಲಿ 53, ಕೊಪ್ಪಳದಲ್ಲಿ 39, ಕೋಲಾರದಲ್ಲಿ 36, ಚಾಮರಾಜನಗದಲ್ಲಿ 33, ಚಿಕ್ಕಮಗಳೂರಿನಲ್ಲಿ 28, ಬೆಂಗಳೂರು ಗ್ರಾಮಾಂತರದಲ್ಲಿ 26, ಚಿತ್ರದುರ್ಗದಲ್ಲಿ 13, ರಾಮನಗರದಲ್ಲಿ 12, ಕೊಡಗಿನಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ಒಂದರಲ್ಲೇ ಇಂದು 50 ಜನರು ಸಾವನ್ನಪ್ಪಿದ್ದು, ಮೈಸೂರು 6, ದಕ್ಷಿಣ ಕನ್ನಡ 6, ಧಾರವಾಡ 5, ಕಲಬುರಗಿ 5, ತುಮಕೂರು 5, ಚಿಕ್ಕಮಂಗಳೂರು 3, ಉಡುಪಿ 3, ಚಿಕ್ಕಬಳ್ಳಾಪುರ 3, ಶಿವಮೊಗ್ಗ 3, ಚಿತ್ರದುರ್ಗ 3, ದಾವಣಗೆರೆ 2,  ಬಳ್ಳಾರಿ 2 , ಬೆಂಗಳೂರು ಗ್ರಾಮಾಂತರ 2, ಹಾಸನ 2, ಕೊಪ್ಪಳ 2,  ಗದಗ 2, ಬೆಳಗಾವಿ 1, ಕೋಲಾರ 1, ಚಾಮರಾಜನಗರ 1, ರಾಯಚೂರು 1, ಹಾವೇರಿ 1, ಉತ್ತರ ಕನ್ನಡ 1 ಸಾವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here