ಬೆಂಗಳೂರು: ಕೈಮಗ್ಗ ನೇಕಾರರಿಗೆ ತಲಾ 5000 ರೂಪಾಯಿ ನೀಡುವ ‘ನೇಕಾರ ಸಮ್ಮಾನ್’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಜವಳಿ ಇಲಾಖೆಯ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಯೋಜನೆಗೆ ಚಾಲನೆ ನೀಡಿದರು.
ಕೈಮಗ್ಗ ನೇಕಾರರಿಗೆ ವಾರ್ಷಿಕವಾಗಿ 5000 ರೂ. ಸಹಾಯ ಧನ ಯೋಜನೆಯನ್ನು ರಾಜ್ಯ ಸರಕಾರ ಆರಂಭಿಸಿದೆ. ಈ ಯೋಜನೆಯು ಇಂದಿನಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದರು. ಇಂದು ಪ್ರತಿ ನೇಕಾರರಿಗೆ ವಾರ್ಷಿಕ 5000 ರೂ. ಗಳಂತೆ ಒಟ್ಟು 2343.20 ಕೋಟಿ ರೂಪಾಯಿಗಳನ್ನು ನೇರವಾಗಿ ಖಾತೆಗೆ ಹಾಕಲಾಯಿತು.
ಇದನ್ನೂ ಓದಿರಿ: ಕಾಂಗ್ರೆಸ್ ಭಯೋತ್ಪಾದಕರ ಪರವೋ ಅಥವಾ ದೇಶಭಕ್ತರ ಪರವೋ – ಬಸವರಾಜ್ ಬೊಮ್ಮಾಯಿ