new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕಿನ ಪ್ರಮಾಮ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನು ಕಾಣುತ್ತಿದೆ. ಇಂದು ರಾಜ್ಯದಲ್ಲಿ 4,471 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಕಂಡುಬಂದ ಸೋಂಕಿನ ಸಂಖ್ಯೆ 7,98,378 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಹೊಸದಾಗಿ ದಾಖಲಾಗುವ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಇದರೊಂದಿಗೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ರಾಜ್ಯದಲ್ಲಿ 7,153 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವುದು ಸಂತಸದ ವಿಷಯವಾಗಿದೆ.

ಆದರೆ ರಾಜ್ಯದಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡುಬರದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಒಂದೇ ದಿನದಲ್ಲಿ ಬೆಂಗಳೂರು ನಗರದಲ್ಲಿ 26 ಸಾವಿನೊಂದಿಗೆ ರಾಜ್ಯದಲ್ಲಿ ಒಟ್ಟು 52 ಸಾವುಗಳು ಉಂಟಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಮರಣ ಹೊಂದಿದವರ ಸಂಖ್ಯೆ 10,873 ಕ್ಕೆ ಏರಿಕೆಯಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ 2,251ಜನರು ಸೋಂಕಿಗೆ ಒಳಗಾಗಿದ್ದು, ಇನ್ನುಳಿದಂತೆ ತುಮಕೂರು 232, ಬಳ್ಳಾರಿ 129, ಮೈಸೂರು 173, ಮಂಡ್ಯ 163, ಹಾಸನ 136, ದಕ್ಷಿಣ ಕನ್ನಡ 136, ಬೆಂಗಳೂರು ಗ್ರಾಮೀಣ 102, ಧಾರವಾಡ 93, ಚಿಕ್ಕಮಂಗಳೂರು 85, ಚಿತ್ರದುರ್ಗ 84, ಉಡುಪಿ 81 ಪ್ರಕರಣಗಳು ದಾಖಲಾಗಿವೆ. ಇನ್ನು ರಾಜ್ಯದಲ್ಲಿ ಕಡಿಮೆಯೆಂದರೆ ಯಾದಗಿರಿ 27, ರಾಯಚೂರು 25, ರಾಮನಗರ 22, ಗದಗ 14, ಬೀದರ್ 7 ಪ್ರಕರಣಗಳು ಪತ್ತೆಯಾಗಿದೆ.

LEAVE A REPLY

Please enter your comment!
Please enter your name here