ಬೆಂಗಳೂರು (ಜೂ 26): ರಾಜ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚುತ್ತ ಸಾಗಿದ್ದು, ಇಂದು ಹೊಸದಾಗಿ 445 ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11005 ಕ್ಕೆ ಏರಿಕೆಯಾದಂತಾಗಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಂತೆಯೇ ಮರಣ ಪ್ರಮಾಣವೂ ಏರಿಕೆಯನ್ನು ಕಾಣುತ್ತಿದೆ. ಇಂದು ಒಂದೇ ದಿನ 10 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 3, ಬಳ್ಳಾರಿ 1, ಕಲಬುರಗಿ 1, ಬೀದರ್ 1, ಬಾಗಕೋಟೆ 1, ಶಿವಮೊಗ್ಗ 1, ಧಾರವಾಡ 1, ಕೋಲಾರ 1 ಸಾವಗಿದೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಮನೆಗೆ ಇಂದು 246 ಜನರು ತೆರಳಿದ್ದರೆ, ಇಲ್ಲಿಯವರೆಗೆ ರಾಜ್ಯದಲ್ಲಿ ಗುಣಮುಖರಾದವರು 6916 ಜನರಾಗಿದ್ದಾರೆ. ಇನ್ನು ರಾಜ್ಯದಲ್ಲಿ 3905 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, ರಾಜ್ಯದಲ್ಲಿ 178 ಪ್ರಖರಣಗಳು ಬಳಕೆ ಮಾಡುತ್ತಿವೆ.
ಇದನ್ನೂ ಓದಿರಿ: ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಪ್ರಶ್ನೆಯೇ ಇಲ್ಲ- ಸಿಎಂ ಬಿಎಸ್ ಯಡಿಯೂರಪ್ಪ
ಇಂದು ದಾಖಲಾದ ಪ್ರಕರಣಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿರುವ ಸೊಂಕಿತರು 21 ಜನರಿದ್ದರೆ, ಅಂತರಾಜ್ಯ ಹಿನ್ನೆಲೆ ಹೊಂದಿದವರು 65 ಜನರಿದ್ದಾರೆ.
ಇನ್ನು ಜಿಲ್ಲಾವಾರು ಸೊಂಕಿತರನ್ನು ನೋಡುವುದಾದರೆ ಬೆಂಗಳೂರು ನಗರ 144, ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33, ಧಾರವಾಡ 30, ರಾಯಚೂರು 14, ಗದಗ 12, ಚಾಮರಾಜನಗರ 11, ಉಡುಪಿ 9, ಯಾದಗಿರಿ 7, ಮಂಡ್ಯ 6, ಉತ್ತರಕನ್ನಡ 6, ಬಾಗಲಕೋಟೆ 6, ಶಿವಮೊಗ್ಗ 6, ಕೋಲಾರ 6, ಮೈಸೂರು 5, ಚಿಕ್ಕಮಂಗಳೂರು 4, ಕೊಡಗು 4, ಹಾಸನ 3, ಬೆಂಗಳೂರು ಗ್ರಾಮಾಂತರ 3, ವಿಜಯಪುರ 2, ತುಮಕೂರು 2, ಹಾವೇರಿ 2, ಬೀದರ್ 1, ಬೆಳಗಾವಿ 1, ದಾವಣಗೆರೆ 1, ರಾಮನಗರ 1, ಚಿತ್ರದುರ್ಗ 1 ಪ್ರಕರಣಗಳು ದಾಖಲಾಗಿವೆ.
ಸಂಜೆಯ ಪತ್ರಿಕಾ ಪ್ರಕಟಣೆ 26/06/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/qzQne5JVVa @BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/8gmKaILrhu— K’taka Health Dept (@DHFWKA) June 26, 2020