239-new-cases-found-in-karnataka

ಬೆಂಗಳೂರು (ಜೂ 25): ರಾಜ್ಯದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಇಂದು 442 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10,560 ಕ್ಕೆ ಏರಿಕೆಯಾದಂತಾಗಿದೆ.

ಇಂದೂ ಸಹ ಕೊರೊನಾ ಸೋಂಕಿನಿಂದ 6 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಈ ಸೋಂಕಿನಿಂದ ಒಟ್ಟು  170 ಜನರು ಕೊನೆಯುಸಿರೆಳೆದಿದ್ದಾರೆ. ಮತ್ತೊಂದೆಡೆ ರಾಜ್ಯದ ರಾಜಧಾನಿಯಲ್ಲಿ ಅತೀ ಹೆಚ್ಚು 113 ಪಾಸಿಟಿವ್ ಪ್ರಖರಣ ಇಂದು ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು 3 ಸಾವಾಗಿದ್ದು, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ ಇಲ್ಲಿ ತಲಾ ಒಂದಂದು ಸಾವಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ ಅಂತರಾಜ್ಯ ಪ್ರಯಾಣ ಮಾಡಿದವರು 81 ಜನರು ಮತ್ತು ಅಂತಾರಾಷ್ಟ್ರೀಯ ಪ್ರಯಾಣದಿಂದ ಬಂದವರು 23 ಜನರಿದ್ದಾರೆ.

ಇನ್ನು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಸಂಖ್ಯೆಗಳನ್ನು ನೋಡುವುದಾದರೆ ಬೆಂಗಳೂರು ನಗರ 113, ಕಲಬುರಗಿ 35, ರಾಮನಗರ 33, ದಕ್ಷಿಣಕನ್ನಡ 29, ಧಾರವಾಡ 26, ಬಳ್ಳಾರಿ 26, ಮೈಸೂರು 22, ಬಾಗಲಕೋಟೆ 18, ಕೊಡಗು 18, ಉಡುಪಿ 14, ಹಾಸನ 12, ಬೆಂಗಳೂರು ಗ್ರಾಮಾಂತರ 12, ಉತ್ತರ ಕನ್ನಡ 11, ವಿಜಯಪುರ 10, ಗದಗ 10, ಹಾವೇರಿ 10, ಮಂಡ್ಯ 9, ಬೀದರ್ 8, ದಾವಣಗೆರೆ 7, ಬೆಳಗಾವಿ 4, ಶಿವಮೊಗ್ಗ 4, ಕೋಲಾರ 4, ಯಾದಗಿರಿ 2, ಚಿಕ್ಕಬಳ್ಳಾಪುರ 2, ತುಮಕೂರು 1, ಚಿಕ್ಕಮಗಳೂರು 1, ಚಾಮರಾಜನಗರ 1 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here