ರಾಜ್ಯದಲ್ಲಿಂದು 41,664 ಹೊಸ ಪ್ರಕರಣಗಳು, 349 ಜನರ ಸಾವು

ಚೀನಾದಿಂದ ಹಿಂದಿರುಗಿದ್ದ ಗುಜರಾತಿನ ಉದ್ಯಮಿಗೆ ಕೋವಿಡ್ ದೃಢ !

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಲುವಾಗಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಸೋಂಕಿನ ಪ್ರಮಾಣದಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಇಳಿಕೆ ಕಂಡುಬರುತ್ತಿಲ್ಲ. ಇಂದು ರಾಜ್ಯದಲ್ಲಿ 41,664 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸಾವಿನ ಸಂಖ್ಯೆಯಲ್ಲಿಯೂ ಯಾವುದೇ ಇಳಿಕೆಯಿಲ್ಲದೆ ಇರುವುದು ಬೇಸರದ ಸಂಗತಿಯಾಗಿದೆ.

ಬೆಂಗಳೂರಿನಲ್ಲಿ 13,402 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 94 ಜನರು ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಒಟ್ಟಾರೆ ಸೋಂಕಿತರ ಸಂಖ್ಯೆ 10,42,714 ಆಗಿದ್ದು, 3,66,791 ಸಕ್ರೀಯ ಪ್ರಕರಣಗಳು ನಗರದಲ್ಲಿವೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗಿದ್ದು, ಇಂದು ರಾಜ್ಯದಲ್ಲಿ 34,425 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ 15,44,982 ಜನರು ಕೊರೋನಾ ಸೋಂಕಿನಿಂದ ಗುಣಮುಖರಾದಂತಾಗಿದೆ.

ಜಿಲ್ಲಾವಾರು ಸೋಂಕಿತರ ಮಾಹಿತಿ

ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ, ಬಾಗಲಕೋಟೆ 584, ಬಳ್ಳಾರಿ 1622, ಬೆಳಗಾವಿ 1502, ಬೆಂಗಳೂರು ಗ್ರಾಮಾಂತರ 1265, ಬೆಂಗಳೂರು ನಗರ 13402, ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಂಗಳೂರು 1093, ಚಿತ್ರದುರ್ಗ 454, ದಕ್ಷಿಣಕನ್ನಡ 1787, ದಾವಣಗೆರೆ 292, ಧಾರವಾಡ 901, ಗದಗ 459, ಹಾಸನ 2443, ಹಾವೇರಿ 267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1188, ಮೈಸೂರು 2489, ರಾಯಚೂರು 467, ರಾಮನಗರ 524, ಶಿವಮೊಗ್ಗ 1081, ತುಮಕೂರು 2302, ಉಡುಪಿ 1146, ಉತ್ತರ ಕನ್ನಡ 1226, ವಿಜಯಪುರ 789, ಯಾದಗಿರಿ 343 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here