ಬೆಂಗಳೂರು (ಜು.19): ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ 4120 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಇದಲ್ಲದೆ ರಾಜ್ಯದಲ್ಲಿ ಒಂದು ದಿನದಲ್ಲಿ ಕೊರೋನಾಗೆ 91 ಜನರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೋನಾದಿಂದ 1290 ಜನರು ಇಂದು ಗುಣಮುಖರಾಗಿದ್ದು, ಇದರೊಂದಿಗೆ ಇಲ್ಲಿಯವರೆಗೆ 23,065 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಶೇ. 36.1 ರಷ್ಟು ಎಂದು ಹೇಳಲಾಗಿದೆ. ಇದಲ್ಲದೆ ಕೊರೊನಾ ಸೋಂಕಿಗೆ ರಾಜ್ಯದ ಜನತೆ ಭಯಬೀಳುವ ಅಗತ್ಯವಿಲ್ಲ ಏಕೆಂದರೆ ಮರಣ ಪ್ರಮಾಣ ಶೇ 2.8 ಮಾತ್ರ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು ಒಂದರಲ್ಲೇ ಇಂದು 2156 ಜನರಿಗೆ ಸೋಂಕು ದೃಡಪಟ್ಟಿದ್ದು, ಒಟ್ಟು 24316 ಸಕ್ರೀಯ ಪ್ರಕರಣಗಳು ಇವೆ. ಇದಲ್ಲದೆ ಇಂದು 36 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇಂದಿನ ಪತ್ರಿಕಾ ಪ್ರಕಟಣೆ 19/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/c3crnWtwD1 pic.twitter.com/QB8bguv8gr— K’taka Health Dept (@DHFWKA) July 19, 2020
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರೋನಾ ಪ್ರಕರಣಗಳ ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಬಳ್ಳಾಪುರ 135, ಉಡುಪಿ 134, ಧಾರವಾಡ 126,ಮೈಸೂರು 110, ಶಿವಮೊಗ್ಗ 104, ಬೆಳಗಾವಿ 87, ಬಳ್ಳಾರಿ 73, ಬೆಂಗಳೂರು ಗ್ರಾಮಾಂತರ 70, ಕಲಬುರಗಿ 69, ಉತ್ತರ ಕನ್ನಡ 69, ದಾವಣಗೆರೆ 62, ಬಾಗಲಕೋಟೆ 60, ಹಾವೇರಿ 54, ಬೀದರ್ 45, ಹಾಸನ 43, ಚಿಕ್ಕಮಗಳೂರು 41, ರಾಯಚೂರು 32, ಗದಗ 30, ರಾಮನಗರ 29, ಕೋಲಾರ 25, ಚಾಮರಾಜನಗರ 25, ತುಮಕೂರು 19, ಕೊಪ್ಪಳ19, ಚಿತ್ರದುರ್ಗ 17, ಕೊಡಗು 13, ಯಾದಗಿರಿ 10, ಮಂಡ್ಯ 7 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.