ಮಹಾಮಾರಿಯನ್ನು ಹರಡಿದ ಚೀನಾ ಈಗ ಗಡಿಯಲ್ಲಿ ಕುತಂತ್ರ ಬುದ್ದಿಯನ್ನು ತೋರಿ ಭಾರತೀಯ ಯೋಧರಿಂದ ಸರಿಯಾಗಿಯೇ ಪೆಟ್ಟು ತಿಂದಿದೆ. ಹೌದು ಸ್ನೇಹಿತರೆ, ಕಳೆದ ಬಾರಿ ಡೋಕ್ಲಾಮ್ ನಲ್ಲಿ ಒಳನುಸುಳಲು ಪ್ರಯತ್ನಿಸಿದಂತೆ ಈ ಬಾರಿಯೂ ಚೈನಾ ಸೈನಿಕರು ಉತ್ತರ ಸಿಕ್ಕಿಮ್ ಪ್ರದೇಶದಲ್ಲಿ ತಮ್ಮ ಮೊಂಡು ಹಟವನ್ನು ತೋರಿದ್ದಾರೆ.
ಚೈನಾ ಮೊದಲಿನಿಂದಲೂ ಗಡಿಗಳಲ್ಲಿ ತಂಟೆ ಮಾಡುತ್ತಾ ತನ್ನ ಪ್ರದೇಶಗಳನ್ನು ವಿಸ್ತರಿಸಿಕೊಳ್ಳುವ ಪ್ರಯತ್ನವನ್ನು ಸದಾ ಮಾಡುತ್ತಲೇ ಇರುತ್ತದೆ. ಎಲ್ಲ ಕಡೆಯಿಂದಲೂ ಮುಖಬಂಗವನ್ನು ಅನುಭವಿಸಿಯೂ ಸುಮ್ಮನಿರದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಸೈನಿಕರು ಈಗ ಭಾರತದ ಗಡಿ ಪ್ರದೇಶ ಉತ್ತರ ಸಿಕ್ಕಿಮ್ ನಲ್ಲಿ ತಗಾದೆ ತೆಗೆದಿವೆ. ಕಳೆದ ಭಾರಿ ಡೋಕ್ಲಾಮ್ ಪ್ರದೇಶದಲ್ಲಿ ಒಳನುಸುಳಲು ಪ್ರಯತ್ನಿಸಿದಾಗ ಹಿಮ್ಮೆಟ್ಟಿಸಿದ್ದ ಭಾರತೀಯ ಸೇನೆಯು ಈ ಭಾರಿಯೂ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡಿದೆ. ಇದರ ಪರಿಣಾಮವಾಗಿ ಚೀನಾದ 9 ಯೋಧರು ಗುಂಡು ತಗುಲಿ ಗಾಯಗೊಂಡಿದ್ದಾರೆ.
ಉತ್ತರ ಸಿಕ್ಕಿಂನ ನಕುಲಾ ಸೆಕ್ಟರ್ ನಲ್ಲಿ ಗಸ್ತುತಿರುಗುತ್ತಿದ್ದ ವೇಳೆಯಲ್ಲಿ ಚೀನಿ ಸೈನಿಕರು, ಭಾರತೀಯ ಯೋಧರನ್ನು ಕೆಣಕಿದ್ದಾರೆ. ಈ ಸಮಯದಲ್ಲಿ ಎರಡೂ ಸೇನಾ ಪಡೆಗಳು ಮುಖಾ ಮುಖಿಯಾಗಿದ್ದು, ಗುಂಡಿನ ದಾಳಿ ನಡೆದಿದೆ. ಇದರ ಪರಿಣಾಮವಾಗಿ ಚೀನಾದ ಸೈನಿಕರು 9 ಮಂದಿಗೆ ಗಾಯಗಳಾಗಿದ್ದು, ನಾಲ್ವರು ಭಾರತೀಯ ಯೋಧರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿರಿ:ಇನ್ಮುಂದೆ ಉದ್ಯೋಗಿಗಳಿಗೆ ‘ಆರೋಗ್ಯ ಸೇತು’ ಆಪ್ ಬಳಸುವುದು ಕಡ್ಡಾಯ
ಇನ್ನು ಈ ಘಟನೆಯ ಕುರಿತು ಭಾರತೀಯ ಆರ್ಮಿಯ ಮೂಲಗಳು ಮಾತನಾಡಿದ್ದು, ಇದೊಂದು ಚಿಕ್ಕ ಘಟನೆಯಾಗಿದೆ. ಎರಡೂ ದೇಶದ ಸೈನಿಕರು ಒಪ್ಪಿಕೊಂಡಿರುವ ನಿಯಮಾವಳಿಗಳ ಅಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಉಭಯ ದೇಶಗಳ ಗಡಿ ವಿವಾಧ ಬಗೆಹರಿಯದ ಹಿನ್ನೆಲೆಯಲ್ಲಿ ಚಿಕ್ಕ ಮುಖಾಮುಖಿ ಏರ್ಪಟ್ಟಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಎರಡೂ ಸೇನೆಗಳ ಆಕ್ರಮಣಕಾರಿ ಸ್ವಭಾವದಿಂದ ಗುಂಡಿನ ದಾಳಿ ನಡೆದು, ಸಣ್ಣ ಪುಟ್ಟ ಗಾಯಗಳು ಉಂಟಾಗಿವೆ ಎಂದು ಹೇಳಲಾಗಿದೆ.
ಸಧ್ಯ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಚೈನಾ ಸಂಕಷ್ಟವನ್ನು ಎದುರಿಸುತ್ತಿದೆ. ಅಲ್ಲದೆ ಅಲ್ಲಿನ ಸಾಮಾನ್ಯ ಜನರು ಸರಕಾರದ ವಿರುದ್ಧ ದಂಗೆಯೋಳಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದರೊಂದಿಗೆ ಐರೋಪ್ಯ ದೇಶಗಳು ಬುದ್ದಿಕಲಿಸಿಯೇ ಸಿದ್ದ ಎನ್ನುವ ಹಟಕ್ಕೆ ಬಿದ್ದಿದ್ದು, ಎಲ್ಲರೂ ಭಾರತದ ಕಡೆಗೆ ಮುಖವನ್ನು ಮಾಡುತ್ತಿದ್ದಾರೆ. ಏಷ್ಯಾ ಖಂಡದಲ್ಲಿ ಚೀನಾಗೆ ಎಲ್ಲ ರೀತಿಯಿಂದಲೂ ಪೈಪೋಟಿ ನೀಡಲು ಶಕ್ತವಾಗಿರುವ ಭಾರತದ ಕಡೆಗೆ ಯುರೋಪಿಯನ್ ದೇಶಗಳ ಗಮನ ಹರಿದಿದ್ದು, ಈ ನಡುವೆ ಚೀನಾದ ಈ ನಡೆ ತನ್ನ ಹಗೆಯನ್ನು ಹೊರಹಾಕಲೂ ಸಾಧ್ಯವಾಗದೆ, ಸುಮ್ಮನೆ ಕುಳಿತುಕೊಳ್ಳಲೂ ಆಗದೆ ಒದ್ದಾಡುವಂತೆ ಕಾಣುತ್ತಿದೆ. ಆದರೆ ಭಾರತೀಯ ಸೇನೆಯು ಈಗ ತುಂಬಾ ಭಲಿಷ್ಟವಾಗಿದ್ದು, ಸುಮ್ಮನೆ ಕುಳಿತುಕೊಳ್ಳುವ ಜಾಯಮಾನವನ್ನು ಬಿಟ್ಟಿರುವಂತೆ ಕಾಣುತ್ತಿದೆ. ಇದರೊಂದಿಗೆ ದೇಶಕ್ಕೆ ಪರಿಪೂರ್ಣವಾದ ಬಹುಮತವನ್ನು ಪಡೆದ ಸರಕಾರವಿದ್ದು, ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಿರುವಾಗ ಚೀನಾ ಸೇನೆಯ ಇಂತಹ ಕುತಂತ್ರ ನಡವಳಿಕೆಗೆ ತಕ್ಕ ಪ್ರತಿಫಲಗಳನ್ನೇ ನೀಡುತ್ತಿರುವ ಸೈನಿಕರ ಧೈರ್ಯ ನಮಗೆ ಹೆಮ್ಮೆಯ ಸಂಗತಿಯಾಗಿದೆ.
Temporary and short duration face-offs occur as the boundary is not resolved. Troops resolve such issues mutually as per established protocols. This has occurred after a long time: Indian Army sources https://t.co/scuySUQYt8
— ANI (@ANI) May 10, 2020