397-new-corona-cases-found-in-karnataka

ಬೆಂಗಳೂರು (ಜೂ.24): ರಾಜ್ಯದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಇಂದು ಬರೋಬ್ಬರು 397 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10,118 ಕ್ಕೆ ಬಂದು ನಿಂತಿದೆ.

ಬುಧವಾರವೂ ಕೊರೊನಾ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ಮುಂದುವರೆದಿದ್ದು, 14 ಜನರು ಬಲಿಯಾಗುವ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ 164 ಸಾವು ಸಂಭವಿಸಿದಂತೆ ಆಗಿದೆ. ಮತ್ತೊಂದೆಡೆ ರಾಜ್ಯದ ರಾಜಧಾನಿ ಬೆಂಗಳೂರು ಸೋಂಕಿತರ ಗೂಡಾಗಿ ಪರಿವರ್ತನೆಯಾಗುತ್ತಿದೆ. ಇಂದು ಇಂದೇ ದಿನಕ್ಕೆ ಬೆಂಗಳೂರಿನಲ್ಲಿ 173 ಪ್ರಕರಣಗಳು ದಾಖಲಾಗಿವೆ.

ಇನ್ನು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಸಂಖ್ಯೆಗಳನ್ನು ನೋಡುವುದಾದರೆ, ಬೆಂಗಳೂರು ನಗರ 173, ಬಳ್ಳಾರಿ 34, ಕಲಬುರಗಿ 22, ರಾಮನಗರ 22, ಉಡುಪಿ 14, ಯಾದಗಿರಿ 13, ದಕ್ಷಿಣ ಕನ್ನಡ 12, ಧಾರವಾಡ 12, ಕೊಪ್ಪಳ 11, ರಾಯಚೂರು 9, ಉತ್ತರ ಕನ್ನಡ 9, ದಾವಣಗೆರೆ 8, ಚಿಕ್ಕಬಳ್ಳಾಪುರ 8, ಮೈಸೂರು 7, ಬೆಂಗಳೂರು ಗ್ರಾಮಾಂತರ 7, ಗದಗ 6, ಕೋಲಾರ 6, ಬೀದರ್ 5, ವಿಜಯಪುರ 4, ಶಿವಮೊಗ್ಗ 3, ಮಂಡ್ಯ 2, ಚಿತ್ರದುರ್ಗ 2, ಚಾಮರಾಜನಗರ 2, ಕೊಡಗು 2, ಬೆಳಗಾವಿ 1, ಹಾಸನ 1, ತುಮಕೂರು 1, ಚಿಕ್ಕಮಂಗಳೂರು 1 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here