ಬೆಂಗಳೂರು (ಜು.17): ಕೊರೊನಾ ಆರ್ಭಟದಿಂದ ರಾಜ್ಯ ಕಂಗಾಲಾಗಿದ್ದು, ಇಂದು ಒಂದೇ ದಿನದಲ್ಲಿ 115 ಸಾವುಗಳು ಮತ್ತು 3,693 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ಒಂದರಲ್ಲೇ 2,208 ಸೋಂಕಿತರು ಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ 3,693 ಪ್ರಕರಣಗಳು ಪತ್ತೆಯಾಗಿದ್ದಾರೆ ಇವುಗಳಲ್ಲಿ ಜಿಲ್ಲಾವಾರು ಸಂಖ್ಯೆಗಳು ಎಷ್ಟು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಬೆಂಗಳೂರು ನಗರ 2208, ಧಾರವಾಡ 157, ಬಳ್ಳಾರಿ 133, ವಿಜಯಪುರ 118, ಬೆಳಗಾವಿ 95, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75, ಬೀದರ್ 69, ಗದಗ 59, ಹಾವೇರಿ 58, ಕೋಲಾರ 51, ದಕ್ಷಿಣ ಕನ್ನಡ 39, ತುಮಕೂರು 36, ರಾಯಚೂರು 33, ಬೆಂಗಳೂರು ಗ್ರಾಮಾಂತರ 33, ದಾವಣಗೆರೆ 31, ಚಿಕ್ಕಬಳ್ಳಾಪುರ 31, ಕೊಪ್ಪಳ 30, ಬಾಗಲಕೋಟೆ 29, ಚಿಕ್ಕಮಗಳೂರು 28, ಚಿತ್ರದುರ್ಗ 24, ಮಂಡ್ಯ 22, ಹಾಸನ 21, ರಾಮನಗರ 14, ಕೊಡಗು 13, ಶಿವಮೊಗ್ಗ 10, ಚಾಮರಾಜನಗರ 10, ಯಾದಗಿರಿ 4 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.
ಬೆಂಗಳೂರು ನಗರವೊಂದರಲ್ಲೇ 2,208 ಸೋಂಕಿತರು ಪತ್ತೆಯಾಗಿದ್ದು, ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಒಟ್ಟು 27,496 ಜನರು ಸೋಂಕಿಗೆ ಒಳಗಾದಂತೆ ಆಗಿದೆ. ಇಂದು ಒಂದೇದಿನದಲ್ಲಿ ನಗರದಲ್ಲಿ 75 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಇಂದು 1028 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದಲ್ಲದೆ 33,205 ಜನರು ಸೋಂಕಿನಿಂದ ಬಳಲುತ್ತಿದ್ದು, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದಿನ ಪತ್ರಿಕಾ ಪ್ರಕಟಣೆ 17/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/VWor7OfB2t pic.twitter.com/MkNmeMapLH— K’taka Health Dept (@DHFWKA) July 17, 2020