ಬೆಂಗಳೂರು (ಜು.21): ರಾಜ್ಯದಲ್ಲಿ ಇಂದೂ ಸಹ ಕೊರೊನಾ ಆರ್ಭಟ ಮುಂದುವರೆದಿದ್ದು, ಬೆಂಗಳೂರಿನಲ್ಲಿ 2,050 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 4,764 ಮಂದಿಗೆ ಸೋಂಕು ಇರುವುದು ಕಂಡುಬಂದಿದೆ. ಇದಲ್ಲದೇ ಒಂದೇ ದಿನದಲ್ಲಿ ಕೋವಿಡ್-19 ಸೋಂಕಿನಿಂದಾಗಿ 55 ಜನರು ಸಾವನ್ನಪ್ಪಿದ್ದಾರೆ.
ಜಾಹಿರಾತು
ಬೆಂಗಳೂರು ಒಂದರಲ್ಲೇ 2,050 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರೊಂದರಲ್ಲೇ 24 ಗಂಟೆಯಲ್ಲಿ 15 ಸೋಂಕಿತರ ಸಾವು ಸಂಬವಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಇಂದು ಸಾವನ್ನಪ್ಪಿದವರ ಸಂಖ್ಯೆ 55 ಕ್ಕೆ ಏರಿದೆ.
ಇದನ್ನೂ ಓದಿರಿ:ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ ಯಶಸ್ವಿ ನಿರ್ಮಾಣ: ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ
ರಾಜ್ಯದಲ್ಲಿ ಇಂದು 1780 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ 47,069 ಜನರು ಇನ್ನೂ ಸೋಂಕಿನಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದಿನ ಪತ್ರಿಕಾ ಪ್ರಕಟಣೆ 22/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/25HktPfrzw pic.twitter.com/fPmJ6M5xv4— K’taka Health Dept (@DHFWKA) July 22, 2020
ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುತ್ತಾ ಹೋದರೆ, ಬೆಂಗಳೂರು ನಗರ 2050, ಉಡುಪಿಯಲ್ಲಿ 281, ಬೆಳಗಾವಿಯಲ್ಲಿ 219, ಕಲಬುರಗಿಯಲ್ಲಿ 175, ದಕ್ಷಿಣ ಕನ್ನಡದಲ್ಲಿ 162, ಧಾರವಾಡದಲ್ಲಿ 158, ಮೈಸೂರಿನಲ್ಲಿ 145, ಬೆಂಗಳೂರು ಗ್ರಾಮಾಂತರದಲ್ಲಿ 139, ರಾಯಚೂರಿನಲ್ಲಿ 135, ಬಳ್ಳಾರಿಯಲ್ಲಿ 134, ಚಿಕ್ಕಬಳ್ಳಾಪುರದಲ್ಲಿ 110, ದಾವಣಗೆರೆಯಲ್ಲಿ 96, ಕೋಲಾರದಲ್ಲಿ 88, ಚಿಕ್ಕಮಗಳೂರಿನಲ್ಲಿ 82, ಬೀದರ್ನ ಲ್ಲಿ 77, ಹಾಸನದಲ್ಲಿ 72, ಗದಗದಲ್ಲಿ 71, ಬಾಗಲಕೋಟೆಯಲ್ಲಿ 70, ಉತ್ತರಕನ್ನಡದಲ್ಲಿ 63, ಶಿವಮೊಗ್ಗದಲ್ಲಿ 59, ವಿಜಯಪುರ 52, ತುಮಕೂರಿನಲ್ಲಿ 52, ಹಾವೇರಿಯಲ್ಲಿ 50, ರಾಮನಗರದಲ್ಲಿ 45, ಯಾದಗಿರಿಯಲ್ಲಿ 43, ಚಿತ್ರದುರ್ಗದಲ್ಲಿ 40, ಮಂಡ್ಯದಲ್ಲಿ 37, ಚಾಮರಾಜನಗರದಲ್ಲಿ 31, ಕೊಪ್ಪಳದಲ್ಲಿ 21, ಕೊಡಗಿನಲ್ಲಿ 7 ಪ್ರಕರಣಗಳು ವರದಿಯಾಗಿವೆ.
ಜ್ಯೋತಿಷ್ಯ ಜಾಹಿರಾತು
ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 9986554733 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 998 6554733.