ಬೆಂಗಳೂರು (ಜು.20): ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 3648 ಮಂದಿಗೆ ಇರುವುದು ಪತ್ತೆಯಾಗಿದೆ. ಇದಲ್ಲದೆ ರಾಜ್ಯದಲ್ಲಿ ಒಂದು ದಿನದಲ್ಲಿ ಕೊರೋನಾಗೆ 72 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಒಂದರಲ್ಲೇ ಇಂದು 1452 ಜನರಿಗೆ ಸೋಂಕು ದೃಡಪಟ್ಟಿದ್ದು, ಒಂದೇ ದಿನದಲ್ಲಿ 31 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿರಿ:ಭ್ರಷ್ಟಾಚಾರ ಆರೋಪ: ಲೆಕ್ಕಕೊಟ್ಟು “ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ” ಎಂದ ಶ್ರೀರಾಮಲು
ಇಂದು ಬೆಂಗಳೂರು ನಗರವೊಂದರಲ್ಲೆ 1,452 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 3,648 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,420 ಕ್ಕೇರಿಕೆಯಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರೋನಾ ಪ್ರಕರಣಗಳ ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 1452, ಬಳ್ಳಾರಿ 234, ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರಗಿ 124, ಉಡುಪಿ 98, ದಕ್ಷಿಣ ಕನ್ನಡ 89, ಉತ್ತರ ಕನ್ನಡ 78, ದಾವಣಗೆರೆ 73, ಹಾಸನ 67, ಕೊಪ್ಪಳ 62, ಬೆಳಗಾವಿ 60, ಚಿಕ್ಕಬಳ್ಳಾಪುರ 60, ರಾಮನಗರ 56, ತುಮಕೂರು 55, ಬಾಗಲಕೋಟೆ 54, ಚಾಮರಾಜನಗರ 49, ಯಾದಗಿರಿ 43, ಚಿಕ್ಕಮಗಳೂರು 43, ಮಂಡ್ಯ 41, ಕೋಲಾರ 41, ಹಾವೇರಿ 36, ಗದಗ 31, ಚಿತ್ರದುರ್ಗ 21, ಬೀದರ್ 26, ಶಿವಮೊಗ್ಗ 19, ಕೊಡಗು 8, ರಾಯಚೂರು 3 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.
ಇಂದಿನ ಪತ್ರಿಕಾ ಪ್ರಕಟಣೆ 20/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/m8PHHmS9aG pic.twitter.com/D3YOkzsLrT— K’taka Health Dept (@DHFWKA) July 20, 2020