ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯತ್ತ ಸಾಗಿದೆ. ಕಳೆದ 24 ಗಂಟೆಗಳಲ್ಲಿ 3,604 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 28,34,630 ಕ್ಕೆ ಏರಿಕೆಯಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 788 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದರೆ, 11 ಜನರು ಬಲಿಯಾಗಿದ್ದಾರೆ. ಇಲ್ಲಿಯವರೆಗಿನ ಬೆಂಗಳೂರಿನ ಒಟ್ಟಾರೆ ಸೋಂಕಿತರ ಸಂಖ್ಯೆ 12,11,430 ತಲುಪಿದೆ.
ರಾಜ್ಯದಲ್ಲಿ ಇಂದು 89 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದಲ್ಲದೇ 7,699 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನೂ ರಾಜ್ಯದಲ್ಲಿ 1,01,042 ಸಕ್ರಿಯ್ಯ ಸೋಂಕಿತರು ಇದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ತಿಳಿಸಿದೆ.
ಇದನ್ನೂ ಓದಿರಿ: ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಿ-ಕೇಂದ್ರ ಸರ್ಕಾರ
ಜಿಲ್ಲಾವಾರು ಸೋಂಕಿತರ ಸಂಖ್ಯೆ:
ಬಾಗಲಕೋಟೆ 7, ಬಳ್ಳಾರಿ 26, ಬೆಳಗಾವಿ 143, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 788, ಬೀದರ್ 8, ಚಾಮರಾಜನಗರ 54, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 126, ಚಿತ್ರದುರ್ಗ 22, ದಕ್ಷಿಣ ಕನ್ನಡ 454, ದಾವಣಗೆರೆ 118, ಧಾರವಾಡ 46, ಗದಗ 18, ಹಾಸನ 322, ಹಾವೇರಿ 13, ಕಲಬುರಗಿ 36, ಕೊಡಗು 115, ಕೋಲಾರ 101, ಕೊಪ್ಪಳ 9, ಮಂಡ್ಯ 109, ಮೈಸೂರು 478, ರಾಯಚೂರು 19, ರಾಮನಗರ 15, ಶಿವಮೊಗ್ಗ 177, ತುಮಕೂರು 116, ಉಡುಪಿ 97, ಉತ್ತರ ಕನ್ನಡ 57, ವಿಜಯಪುರ 9, ಯಾದಗಿರಿ 4 ಸೋಂಕಿತರು ಪತ್ತೆಯಾಗಿದ್ದಾರೆ.