ಬೆಂಗಳೂರು ( ಜೂ.19): ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು ಒಂದೇ ದಿನದಲ್ಲಿ 10 ಜನರನ್ನು ಬಲಿ ಪಡೆದಿದೆ. ಇದಲ್ಲದೇ 337 ಜನರಿಗೆ ಕೋವಿಡ್-19 ರ ಸೋಂಕುಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 8281 ಕ್ಕೆ ಏರಿಕೆಯಾದಂತಾಗಿದೆ.
ಇನ್ನು ಬೆಂಗಳೂರಿಗರಿಗೆ ಕೊರೊನಾ ದಿನದಿಂದ ದಿನ ಬೆಂಬಿಡದೆ ಕಾಡುತ್ತಿದ್ದು, ಕೇವಲ 24 ಗಂಟೆಗಳಲ್ಲಿ 138 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕಲಬುರಗಿ ಸಹ ಸೇರಿಕೊಂಡಿದ್ದು, ಪ್ರತಿದಿನ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ.
ಇನ್ನು ಜಿಲ್ಲಾವಾರು ಸೋಂಕಿತರನ್ನು ನೋಡುವುದಾದರೆ ಬೆಂಗಳೂರು ನಗರ 138, ಕಲಬುರಗಿ 52, ಬಳ್ಳಾರಿ 37, ಹಾಸನ18, ದಕ್ಷಿಣ ಕನ್ನಡ 13, ದಾವಣಗೆರೆ 12, ಉಡುಪಿ 11, ಬೀದರ್ 10, ಮೈಸೂರು 6, ಕೊಪ್ಪಳ 6, ಯಾದಗಿರಿ 4, ಕೋಲಾರ 4, ಬೆಂಗಳೂರು ಗ್ರಾಮಾಂತರ 4, ಮಂಡ್ಯ 3, ಧಾರವಾಡ 3, ಚಿಕ್ಕಬಳ್ಳಾಪುರ 3, ಬಾಗಲಕೋಟೆ 3, ರಾಮನಗರ 3, ಚಿಕ್ಕಮಂಗಳೂರು 2, ಚಿಕ್ಕಮಂಗಳೂರು 2, ಉತ್ತರ ಕನ್ನಡ 1, ಬೆಳಗಾವಿ 1, ಶಿವಮೊಗ್ಗ 1 ಪ್ರಕರಣಗಳು ದಾಖಲಾಗಿವೆ.
ಇಂದು ಸೋಂಕಿನಿಂದ 230 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ ರಾಜ್ಯದಲ್ಲಿ 2943 ಜನರು ಸಕ್ರೀಯರಾಗಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. 78 ಜನರು ಐಸಿಯು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 19/06/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/zscRIlpDxz@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/33bqqzJBBc— K’taka Health Dept (@DHFWKA) June 19, 2020