including-2-cases-in-karnataka-40-cases-of-delta-plus-covid-variant-in-4-states

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,310 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೇ 114 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 614 ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,09,687 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 17 ಜನರು ಜೀವ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6,524 ಜನರು ಗುಣಮುಖರಾಗಿದ್ದು, ಇನ್ನೂ 1,07,195 ಜನರು ಸೋಂಕಿಗೆ ತುತ್ತಾಗಿ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ತಿಳಿಸಿದೆ.

ಇದನ್ನೂ ಓದಿರಿ: ಜೂನ್ 28 ರಿಂದ 2 ದಿನ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ

ಜಿಲ್ಲಾವಾರು ಸೋಂಕಿತರ ಮಾಹಿತಿ:

ಬಾಗಲಕೋಟೆ 8, ಬಳ್ಳಾರಿ 29, ಬೆಳಗಾವಿ 87, ಬೆಂಗಳೂರು ಗ್ರಾಮಾಂತರ 80, ಬೆಂಗಳೂರು ನಗರ 614, ಬೀದರ್ 6, ಚಾಮರಾಜನಗರ 71, ಚಿಕ್ಕಬಳ್ಳಾಪುರ 47, ಚಿಕ್ಕಮಗಳೂರು 39, ಚಿತ್ರದುರ್ಗ 13, ದಕ್ಷಿಣ ಕನ್ನಡ 377, ದಾವಣಗೆರೆ 89, ಧಾರವಾಡ 34, ಗದಗ 23, ಹಾಸನ 399, ಹಾವೇರಿ 29, ಕಲಬುರಗಿ 14, ಕೊಡಗು 183, ಕೋಲಾರ 140, ಕೊಪ್ಪಳ 21, ಮಂಡ್ಯ 119, ಮೈಸೂರು 367, ರಾಯಚೂರು 14, ರಾಮನಗರ 11, ಶಿವಮೊಗ್ಗ 212, ತುಮಕೂರು 80, ಉಡುಪಿ- 92, ಉತ್ತರ ಕನ್ನಡ 99, ವಿಜಯಪುರ 8, ಯಾದಗಿರಿ 5 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿರಿ: ರೈಲಿನಲ್ಲಿ ಸ್ವಗ್ರಾಮಕ್ಕೆ ತೆರಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್

LEAVE A REPLY

Please enter your comment!
Please enter your name here