ಬೆಂಗಳೂರು (ಜೂನ್ 16): ರಾಜ್ಯದಲ್ಲಿ ಕೊರೊನಾ ಇಂದು ಮುನ್ನೂರರ ಗಡಿಯನ್ನು ದಾಟುವ ಮೂಲಕ ಆತಂಕವನ್ನು ಉಂಟುಮಾಡಿದೆ. ಹೊಸದಾಗಿ ಮಂಗಳವಾರ 317 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ 7530 ಕ್ಕೆ ಏರಿಕೆಯಾದಂತಾಗಿದೆ.
ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ದಕ್ಷಿಣ ಕನ್ನಡ 79, ಕಲಬುರಗಿ 63, ಬಳ್ಳಾರಿ 53, ಬೆಂಗಳೂರು ನಗರ 47, ಧಾರವಾಡ 8, ಶಿವಮೊಗ್ಗ 7, ಉಡುಪಿ 7, ಯಾದಗಿರಿ 6, ರಾಯಚೂರು 6, ಉತ್ತರ ಕನ್ನಡ 6, ಹಾಸನ 5, ವಿಜಯಪುರ 4, ಮೈಸೂರು 4, ಗದಗ 4, ಚಿಕ್ಕಮಂಗಳೂರು 4, ರಾಮನಗರ 4, ಕೊಪ್ಪಳ 4, ಬೆಳಗಾವಿ 3, ಬೀದರ 2, ತುಮಕೂರು 1 ಪ್ರಕರಣಗಳು ದಾಖಲಾಗಿವೆ.
ಇಂದು ರಾಜ್ಯದಾದ್ಯಂತ 322 ಜನರು ಸೋಂಕಿನಿಂದ ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದರೆ, 2976 ಪ್ರಕರಣಗಳು ರಾಜ್ಯದಲ್ಲಿ ಸಕ್ರೀಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 108 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ ಮತ್ತು 78 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ..
ಸಂಜೆಯ ಪತ್ರಿಕಾ ಪ್ರಕಟಣೆ 16/06/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/xpXIW0ToKf@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/SgzR3baR5O— K’taka Health Dept (@DHFWKA) June 16, 2020