ಬೆಂಗಳೂರು (ಜೂನ್ 13): ರಾಜ್ಯದಲ್ಲಿಂದು ಕೊರೊನಾ ತನ್ನ ರೌದ್ರ ನರ್ತನ ಮುಂದುವರೆಸಿದ್ದು, ಹೊಸದಾಗಿ 308 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಲೇ ಇದೆ. ಇಂದು ಮೂವರು ಬಲಿಯಾಗುವ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 81 ಕ್ಕೆ ಏರಿಕೆಯಾದಂತಾಗಿದೆ.
ಇದರೊಂದಿಗೆ ಇಂದು ಕೊರೊನಾದಿಂದ ಗುಣಮುಖರಾಗಿ ಒಟ್ಟು 209 ಜನರು ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೆ ಸೋಂಕಿನಿಂದ ಒಟ್ಟು 3648 ಜನರು ಚೇತರಿಸಿಕೊಂಡು ಮನೆಗೆ ತೆರಳಿದಂತಾಗಿದೆ. ಇನ್ನೂ 3092 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿರಿ: ಸ್ತನ್ಯಪಾನದಿಂದ ಕೊರೊನಾ ಹರಡುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಕಲಬುರಗಿ 67, ಯಾದಗಿರಿ 52, ಬೀದರ್ 42, ಬೆಂಗಳೂರು ನಗರ 31, ದಕ್ಷಿಣ ಕನ್ನಡ 30, ಧಾರವಾಡ 20, ಉಡುಪಿ 14, ಬಳ್ಳಾರಿ 11, ಹಾಸನ 11, ವಿಜಯಪುರ 6, ರಾಯಚೂರು 5, ಉತ್ತರ ಕನ್ನಡ 5, ಕೋಲಾರ 4, ದಾವಣಗೆರೆ 3, ಮಂಡ್ಯ 2, ಹಾವೇರಿ 2, ರಾಮನಗರ 1, ಬಾಗಲಕೋಟೆ 1, ಮೈಸೂರು 1 ಪ್ರಕರಣಗಳು ದಾಖಲಾಗಿವೆ.
ಕೋವಿಡ್19 ಮಾಹಿತಿ: 13ನೇ ಜೂನ್ 2020
— CM of Karnataka (@CMofKarnataka) June 13, 2020
ಒಟ್ಟು ಪ್ರಕರಣಗಳು: 6824
ಮೃತಪಟ್ಟವರು: 81
ಗುಣಮುಖರಾದವರು: 3648
ಹೊಸ ಪ್ರಕರಣಗಳು: 308
ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.
ಹೆಚ್ಚಿನ ಮಾಹಿತಿಗಾಗಿ- https://t.co/IOK8K5PFLw pic.twitter.com/qsOj4MswER