3-terrorist-killed-in-j-ks-kulgam-encounter

ಜಮ್ಮು-ಕಾಶ್ಮೀರ: ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನೆ ಅಡಗಿ ಕುಳಿತಿದ್ದ 3 ರು ಉಗ್ರರನ್ನು ಎನ್ಕೌಂಟರ್ ಮಾಡಿಮುಗಿಸಿದೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿಗಳು ಇನ್ನೇನು ಬರಬೇಕಿದೆ.

ಕಳೆದ ಜು.5 ರಂದು ನಡೆದ ಎನ್ಕೌಂಟರ್ ನಲ್ಲಿ 2 ಉಗ್ರರನ್ನು ಸದೆಬಡಿದಿದ್ದ ಸೇನೆ ಕಾರ್ಯಾಚರಣೆಯನ್ನು ಮುಂದುವರೆಸಿತ್ತು. ಇಂದು ಬೆಳಗಿನ ಜಾವ ಉಗ್ರರು ಅಡಗಿಕುಳಿತಿರುವ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭದ್ರತಾ ಪಡೆ ಆಗಮಿಸುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ಪ್ರಾರಂಭಿಸಿದರು. ಈ ಸಮಯದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿ ಪ್ರತಿದಾಳಿಗೆ ಸೇನೆ ಮುಂದಾಯಿತು. ಈ ಹೋರಾಟದಲ್ಲಿ 3 ಉಗ್ರರು ಕೆಲವೇ ಕ್ಷಣದಲ್ಲಿ ಹತರಾದರು ಎಂದು ತಿಳಿದು ಬಂದಿದೆ.

ಇನ್ನೂ ಹೆಚ್ಚಿನ ಉಗ್ರರು ಅಡಗಿರಬಹುದು ಎಂಬ ಸಮಶಯದ ಮೇಲೆ ಆ ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಈ ಮೂಲಕ ಭಾರತದ ಒಳಗೆ ನುಸುಳಿ ವಿದ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿರುವ ಉಗ್ರರು ನರಕ ಸೇರಿದಂತಾಗಿದೆ.

LEAVE A REPLY

Please enter your comment!
Please enter your name here