ಪುಲ್ವಾಮಾ ಎನ್ಕೌಂಟರ್: ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಸೇರಿ 3 ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ

0
suspicious-movement-seen-in-baramulla-of-jammu-and-kashmir-army-shelves-two-terrorists

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಎಲ್ಇಟಿ ಕಮಾಂಡರ್ ಸೇರಿ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ.

ಪುಲ್ವಾಮಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಮುಂದಾಯಿತು. ಸೇನೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿಗೆ ಮುಂದಾದರು. ಕೂಡಲೇ ಆ ಪ್ರದೇಶವನ್ನು ಸುತ್ತುವರಿದ ಸೇನಾಪಡೆ ಏನ್ ಕೌಂಟರ್ ಗೆ ಮುಂದಾಯಿತು.

ಇದನ್ನೂ ಓದಿರಿ: ಒಲಿಂಪಿಕ್ಸ್ 2021: ಟೋಕಿಯೋದತ್ತ 228 ಅಥ್ಲೀಟ್ ಗಳ ಭಾರತ ತಂಡ, ಮಹತ್ವದ್ದು ಸಾಧಿಸಿ ಎಂದ ಪ್ರಧಾನಿ ಮೋದಿ

ಸೇನೆಯ ಯಶಸ್ವಿ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಎಲ್ಇಟಿ ಕಮಾಂಡರ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಹತ್ಯೆಯಾಗಿರುವ ಎಲ್ಇಟಿ ಕಮಾಂಡರ್ ನನ್ನು ಐಜಾಜ್ ಅಲಿಯಾಸ್ ಅಬು ಹುರೈರಾ ಎಂದು ಗುರ್ತಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here