ಮೌಂಟ್ ಮೌಂಗನುಯಿ: ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಟಿ-20 ವಿಶ್ವಕಪ್ ಸೋಲಿನ ನಂತರ ಭಾರತ ಕ್ರಿಕೆಟ್ ತಂಡ ಮತ್ತೆ ಜಯದ ಹಳಿಗೆ ಮರಳಿದೆ.
ಇಂದು ನಡೆದ ಭಾರತ-ನ್ಯೂಜಿಲ್ಯಾಂಡ್ 2ನೇ ಟಿ20 ಪಂದ್ಯದಲ್ಲಿ ಭಾರತ 191 ರನ್ನುಗಳ ಬೃಹತ್ ಮೊತ್ತ ಕಲೆಹಾಕಿತ್ತು. 192 ರನ್ನುಗಳ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ದೀಪಕ್ ಹೂಡಾ ಅವರ ಮಾರಕ ದಾಳಿಗೆ ತುತ್ತಾಗಿ 126 ರನ್ನುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು.
ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ಇಶಾನ್ ಕಿಶನ್ 36 ರನ್ ಪೇರಿಸಿ ಉತ್ತಮ ಓಪನಿಂಗ್ ನೀಡಿದರು. ಜೊತೆಯಾಟ ನೀಡುವಲ್ಲಿ ವಿಫಲರಾದ ರಿಷಬ್ ಪಂತ್ ಕೇವಲ 6 ರನ್ನುಗಳಿಗೆ ವಿಕೆಟ್ ಒಪ್ಪಿಸಿದರು. ಆನಂತರ ಬಂದ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಗೆ ಇಳಿದರು. ಕೇವಲ 51 ಎಸೆತಗಳಲ್ಲಿ 111 ರನ್ನುಗಳನ್ನು ಕಲೆಹಾಕಿ ಪ್ರಶಂಸೆಗೆ ಗುರಿಯಾದರು. ಮತ್ತೊಂದೆಡೆ ಶ್ರೇಯಸ್ ಅಯ್ಯರ್ 13 ರನ್ನು ಮತ್ತು ಹಾರ್ದಿಕ್ ಪಾಂಡ್ಯ 13 ರನ್ನುಗಳನ್ನು ತಂಡದ ಮೊತ್ತಕ್ಕೆ ಸೇರಿಸಿದರು.
ಇದನ್ನೂ ಓದಿ: ಆಟೋದಲ್ಲಿ ನಿಗೂಢ ಸ್ಫೋಟ: ಓರ್ವನನ್ನು ವಶಕ್ಕೆ ಪಡೆದ ಪೊಲೀಸರು
ಇನ್ನು ನ್ಯೂಜಿಲ್ಯಾಂಡ್ ಪರವಾಗಿ ಬ್ಯಾಟಿಂಗ್ ಗೆ ಇಳಿದ ಡೆವೊನ್ ಕಾನ್ವೇ 25, ಕೇನ್ ವಿಲಿಯಮ್ಸನ್ 61, ಗ್ಲೇನ್ ಪಿಲಿಪ್ಸ್ 12 ಮತ್ತು ಮಿಚೆಲ್ 10 ರನ್ ತಂಡಕ್ಕೆ ನೀಡಿದ್ದಾರೆ.
ಭಾರತದ ಬೌಲರ್ ಗಳು ಇಂದು ನ್ಯೂಜಿಲ್ಯಾಂಡ್ ತಂಡವನ್ನು ಬಿಟ್ಟೂ ಬಿಡದೆ ಕಾಡಿದರು. ದೀಪಕ್ ಹುಡಾ 4 ವಿಕೆಟ್ ಕಬಳಿಸುವಲ್ಲಿ ಸಫಲರಾದರು. ಮೊಹಮ್ಮದ್ ಸಿರಾಜ್ ಮತ್ತು ಚಹಾಲ್ ತಲಾ 2 ವಿಕೆಟ್ ಗಳಿಸಿದರೆ, ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಗಳಿಸಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಗೆದ್ದಿದ್ದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಬ್ರೈನ್ ಸ್ಟ್ರೋಕ್‌ನಿಂದ ಸಾವು