ಬೆಂಗಳೂರು: ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ರಾಜ್ಯಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಶೇ 35 ರಷ್ಟು ಅಂಕಗಳನ್ನು ನೀಡಿ ಎಲ್ಲ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡಲಾಗುವುದು ಎಂದು ಹೈಕೋರ್ಟ್ ಗೆ ಸರಕಾರ ತಿಳಿಸಿದೆ.
ರಾಜ್ಯಸರ್ಕಾರ ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ಶೇ 35 ರಷ್ಟು ಅಂಕಗಳನ್ನು ನೀಡಿ ತೇರ್ಗಡೆ ಮಾಡಲು ನಿರ್ಧರಿಸಿದ್ದು, ಇದಕ್ಕೆ ಹೆಚ್ಚಿಗೆಯಾಗಿ ಶೇ 5 ರಷ್ಟು ಗ್ರೇಸ್ ಮಾರ್ಕ್ ಗಳನ್ನೂ ಸೇರಿಸುವುದಾಗಿ ತಿಳಿಸಿದೆ. ಆದರೆ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಸರಕಾರ ದ್ವಿತೀಯ ಪಿಯುಸಿಯ 5.86 ಲಕ್ಷ ಹೊಸ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡಿತ್ತು. ಆದರೆ ರಿಪೀಟರ್ಸ್ ಪರೀಕ್ಷೆ ಬರೆಯುವಂತೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಇದನ್ನು ಪ್ರಶ್ನಿಸಿ ರಿಪೀಟರ್ಸ್ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆಹೋಗಿದ್ದರು.
ಇದನ್ನೂ ಓದಿರಿ: ಉತ್ತರಾಖಂಡದ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಅಧಿಕಾರ ಸ್ವೀಕಾರ