ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದ್ದು, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ತ್ರತೀಯ ಸ್ಥಾನ ಪಡೆದಿವೆ. ಈ ವರ್ಷ ಪರೀಕ್ಷೆ ಬರೆದ 6.75 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ. 69.20 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೊದಲಬಾರಿಗೆ 5.56 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಅವರಲ್ಲಿ 3,84,947 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು 91,025 ಪುನರಾವರ್ತಿತ  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 25,602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಯಾರು ಎಂದು ತಿಳಿಯೋಣ..
ವಿಜ್ಞಾನ ವಿಭಾಗ :

ಅಭಿಜ್ಞಾ ರಾವ್, ಉಡುಪಿ  (ಪ್ರಥಮ ಸ್ಥಾನ)

ವಿದ್ಯೋದಯ ಪಿಯು ಕಾಲೇಜು ಉಡುಪಿ

ಪ್ರೇರಣಾ ಎಂ ಏನ್. ಬೆಂಗಳೂರು (ದ್ವಿತೀಯ)

ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು ಮಲ್ಲೇಶ್ವರ

ಆಕಾಂಕ್ಷಾ ಪೈ , ಬೆಂಗಳೂರು (ತ್ರತೀಯ)

ಆರ್. ವಿ. ಪಿಯು ಕಾಲೇಜು ಜಯನಗರ

ವಾಣಿಜ್ಯ ವಿಭಾಗ :

ಟಿಸಿಎಸ್ ರವೀಂದ್ರ ಶ್ರೀವಾತ್ಸವ್ (ಪ್ರಥಮ)

ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು ಮಲ್ಲೇಶ್ವರ

ಬೃಂದಾ ಜೆಏನ್ , ಮೈಸೂರು (ದ್ವಿತೀಯ)

ಎಜಿಎಸ್ ಗರ್ಲ್ಸ್ ಪಿಯು ಕಾಲೇಜ್ ಮೈಸೂರು

ಸಿಂಧು ಜಿ ಎಂ, ಸಾಗರ (ತ್ರತೀಯ)

ಗವರ್ನಮೆಂಟ್ ಪಿಯು ಕಾಲೇಜು ಸಾಗರ

ಕಲಾ ವಿಭಾಗ : 

ಕಾಮೇಗೌಡ ದಾಸನಗೌಡ, ಬಳ್ಳಾರಿ  (ಪ್ರಥಮ)

ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು ಬಳ್ಳಾರಿ

ಸ್ವಾಮಿ ಆರ್ ಎಂ , ಬಳ್ಳಾರಿ (ದ್ವಿತೀಯ)

ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು ಬಳ್ಳಾರಿ

ಮೊಹಮ್ಮದ್ ರಫೀಕ್, ಬಳ್ಳಾರಿ (ತ್ರತೀಯ)

ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು ಬಳ್ಳಾರಿ

ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕಿಯರು ಶೇ. 68.73 ಮತ್ತು ಬಾಲಕರು 54.77 ರಷ್ಟು ಉತ್ತೀರ್ಣರಾಗಿದ್ದಾರೆ. ಇನ್ನು ಶೇ. 90.71 ರಷ್ಟು ಫಲಿತಾಂಶ ಪಡೆದು ಉಡುಪಿ ಪ್ರಥಮ ಸ್ಥಾನ, ಶೇ. 81.53 ಫಲಿತಾಂಶ ಪಡೆದು ದಕ್ಷಿಣ ಕನ್ನಡ ದ್ವಿತೀಯ ಮತ್ತು ಶೇ. 80.97 ಫಲಿತಾಂಶ ಪಡೆದು ಕೊಡಗು ತ್ರತೀಯ ಸ್ಥಾನ ತಮ್ಮದಾಗಿಸಿಕೊಂಡಿವೆ.  ಇದರಂತೆ ವಿಜಯಪುರ ಶೇ.  54.22 ಫಲಿತಾಂಶ ಪಡೆಯುವ ಮೂಲಕ ಕೊನೆಯ ಸ್ಥಾನಕ್ಕೆ ಜಾರಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here