29,438-new-covid-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆಯು ತೀವ್ರವಾಗಿ ಭಾದಿಸುತ್ತಿದ್ದು, ಇಂದು ರಾಜ್ಯದಲ್ಲಿ ಹೊಸದಾಗಿ 29,438 ಜನರಲ್ಲಿ ಪಾಸಿಟಿವ್ ವರದಿಯು ಬಂದಿದೆ. ಇದಲ್ಲದೇ ಬೆಂಗಳೂರಿನಲ್ಲಿ 149 ಸೇರಿ ರಾಜ್ಯದಲ್ಲಿ ಒಟ್ಟು 208 ಜೀವಗಳನ್ನು ಬಲಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 29,438 ಜನರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ 13,04,397 ಜನರು ಸೋಂಕಿಗೆ ಒಳಗಾದಂತಾಗಿದೆ. ಬೆಂಗಳೂರಿನಲ್ಲಿ ಇಂದು 17,342 ಜನರಿಗೆ ಸೋಂಕಿರುವುದು ಪತ್ತೆಯಾಗಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇದಲ್ಲದೆ ಬೆಂಗಳೂರು ನಗರವೊಂದರಲ್ಲೇ 149 ಜನರು ಸಾವನ್ನಪ್ಪಿದ್ದಾರೆ.

ಕೊರೋನಾ ಸಂಕಷ್ಟದ ನಡುವೆ ಇಂದು 9,058 ಗುಣಮುಖರಾಗಿ ಮನೆಗೆ ತೆರಳಿದ್ದು, ಸಂತಸವನ್ನು ಉಂಟುಮಾಡಿದೆ. ಇದರೊಂದಿಗೆ ಇಲ್ಲಿಯವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10,55,612 ಗೆ ಏರಿಕೆಯಾಗಿದೆ.

ಇನ್ನು ರಾಜ್ಯದ ಜಿಲ್ಲೆಗಳಲ್ಲಿ ಪತ್ತೆಯಾದ ಪ್ರಕರಣಗಳ ಸಂಪೂರ್ಣ ವಿವರ ಇಂತಿದೆ. ಇಡೀ ರಾಜ್ಯದಲ್ಲಿಯೇ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಅಂದರೆ 17,342, ತುಮಕೂರು 1,559, ಬೆಂಗಳೂರು ಗ್ರಾಮಾಂತರ 684, ಬಳ್ಳಾರಿ 731, ಬಾಗಲಕೋಟೆ 105, ಬೆಳಗಾವಿ 313, ಬೀದರ್ 365, ಚಾಮರಾಜನಗರ 295, ಚಿಕ್ಕಬಳ್ಳಾಪುರ 506, ಚಿಕ್ಕಮಗಳೂರು 185, ಚಿತ್ರದುರ್ಗ 114, ದಕ್ಷಿಣ ಕನ್ನಡ 517, ದಾವಣಗೆರೆ 254, ಧಾರವಾಡ 385, ಗದಗ 76, ಹಾಸನ 823, ಹಾವೇರಿ 92, ಕಲಬುರಗಿ 791, ಕೊಡಗು 196, ಕೋಲಾರ 373, ಕೊಪ್ಪಳ 266, ಮಂಡ್ಯ 688, ಮೈಸೂರು 536, ರಾಯಚೂರು 497, ರಾಮನಗರ 385, ಶಿವಮೊಗ್ಗ 266, ಉಡುಪಿ 403, ಉತ್ತರ ಕನ್ನಡ 185, ವಿಜಯಪುರ 411, ಯಾದಗಿರಿ 95 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here