including-2-cases-in-karnataka-40-cases-of-delta-plus-covid-variant-in-4-states

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2848 ಜನರಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 28,56,49 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಂದು 67 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ತಿಳಿಸಿದೆ.

ಬೆಂಗಳೂರು ಮಹಾನಗರದಲ್ಲಿ ಇಂದು 520 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದಲ್ಲದೇ ಕೋವಿಡ್ ಸೋಂಕಿಗೆ 7 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಇಂದು 5,631 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ ಸೋಂಕಿನಿಂದ ಬಳಲುತ್ತಿರುವ 41,996 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿರಿ: ಹೆಚ್ ಡಿ ಕುಮಾರಸ್ವಾಮಿ – ಸುಮಲತಾ ಅಂಬರೀಷ್ ನಡುವೆ ಮುಗಿಯದ ಮಾತಿನ ಸಮರ

ಜಿಲ್ಲಾವಾರು ಸೋಂಕಿತರ ಸಂಖ್ಯೆ:

ಬಾಗಲಕೋಟೆ 2, ಬಳ್ಳಾರಿ 15, ಬೆಳಗಾವಿ 95, ಬೆಂಗಳೂರು ಗ್ರಾಮಾಂತರ 57, ಬೆಂಗಳೂರು ನಗರ 520, ಬೀದರ 6, ಚಾಮರಾಜನಗರ 49, ಚಿಕ್ಕಬಳ್ಳಾಪುರ 11, ಚಿಕ್ಕಮಂಗಳೂರು 196, ಚಿತ್ರದುರ್ಗ 60, ದಕ್ಷಿಣ ಕನ್ನಡ 265, ದಾವಣಗೆರೆ 30, ಧಾರಾವಾಡ 12, ಗದಗ 7, ಹಾಸನ 383, ಹಾವೇರಿ 12, ಕಲಬುರಗಿ 26, ಕೊಡಗು 120, ಕೋಲಾರ 64, ಕೊಪ್ಪಳ 5, ಮಂಡ್ಯ 84, ಮೈಸೂರು 371, ರಾಯಚೂರು 9, ರಾಮನಗರ 10, ಶಿವಮೊಗ್ಗ 140, ತುಮಕೂರು 126, ಉಡುಪಿ 108, ಉತ್ತರ ಕನ್ನಡ 56, ವಿಜಯಪುರ 7, ಯಾದಗಿರಿ 2 ಪ್ರಕರಣಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here