2738-new-covid-19-cases-reported-in-karnataka

ಬೆಂಗಳೂರು(ಜು.13): ರಾಜ್ಯದಲ್ಲಿ ಇಂದು 2738 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ ರಾಜ್ಯದಲ್ಲಿ 41,581 ಜನರಿಗೆ ಸೋಂಕು ತಗುಲಿದಂತಾಗಿದೆ. ಇದರೊಂದಿಗೆ 73 ಜನರು ಕೊರೊನಾ ಸೋಂಕಿನಿಂದ ಇಂದು ಜೀವ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದ ರಾಜಧಾನಿಯಲ್ಲಿ ಒಂದೇ ದಿನದಲ್ಲಿ 1315 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಗುಣಮುಖರಾದವರು ಎಷ್ಟು ಎಂದು ನೋಡುವುದಾದರೆ, ಇಂದು 839 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 16,248 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ. ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 24,572 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು 1315, ಯಾದಗಿರಿ 162, ಮೈಸೂರು 151, ದಕ್ಷಿಣಕನ್ನಡ 131, ಬಳ್ಳಾರಿ 106, ಕಲಬುರಗಿ 89, ವಿಜಯಪುರ 86, ಶಿವಮೊಗ್ಗ 74, ಧಾರವಾಡ 71, ಉಡುಪಿ 53, ತುಮಕೂರು 48, ರಾಯಚೂರು 45, ದಾವಣಗೆರೆ 45, ಚಿಕ್ಕಬಳ್ಳಾಪುರ 42, ಉತ್ತರಕನ್ನಡ 37, ಬಾಗಲಕೋಟೆ 37, ಕೊಪ್ಪಳ 31, ಮಂಡ್ಯ 30, ಕೊಡಗು 29, ಬೆಳಗಾವಿ 27, ಹಾಸನ 25, ಬೀದರ್ 23, ಬೆಂಗಳೂರು ಗ್ರಾಮಾಂತರ 21, ಕೋಲಾರ 21, ಚಿಕ್ಕಮಗಳೂರು 10, ಚಾಮರಾಜನಗರ 9, ಚಿತ್ರದುರ್ಗ 8, ಗದಗ 6, ಹಾವೇರಿ 6 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.

ಸಾವಿಗೀಡಾದ ಸೋಂಕಿತರು ಯಾವ ಯಾವ ಜಿಲ್ಲೆಯವರು ?

ಇಂದು ರಾಜ್ಯದಲ್ಲಿ 73 ಸೋಂಕಿತರು ಸಾವನ್ನಪ್ಪಿದ್ದಾರೆ. ಇವರ ಸಂಖ್ಯೆಯನ್ನು ಜಿಲ್ಲಾವಾರು ನೋಡುವುದಾದರೆ, ಬೆಂಗಳೂರು ನಗರ 47, ಮೈಸೂರು 6, ಧಾರವಾಡ 5, ಶಿವಮೊಗ್ಗ 3, ಬಾಗಲಕೋಟೆ 2, ಕೊಡಗು 2, ಬೆಳಗಾವಿ 2, ಹಾಸನ 1, ಗದಗ 1, ತುಮಕೂರು 1, ದಾವಣಗೆರೆ 1, ಉತ್ತರ ಕನ್ನಡ 1, ಹಾವೇರಿ 1 ಸಾವಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

LEAVE A REPLY

Please enter your comment!
Please enter your name here