covid-19-378-new-cases-in-karnataka

ಬೆಂಗಳೂರು(ಜು.9): ರಾಜ್ಯದಲ್ಲಿ ಇಂದು ಸಹ ಕೊರೊನಾ ಸೋಂಕು ಬೆಂಬಿಡದೆ ಕಾಡಿದ್ದು, 2627 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ 71 ಜನರು ಕೊರೊನಾ ಸೋಂಕಿನಿಂದ ಇಂದು ಜೀವ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದ ರಾಜಧಾನಿಯಲ್ಲಿ ಒಂದೇ ದಿನದಲ್ಲಿ 1525 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಗುಣಮುಖರಾದವರು ಎಷ್ಟು ಎಂದು ನೋಡುವುದಾದರೆ, 693 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 15,409 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ. ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 22,746 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

– ಜಾಹಿರಾತು –

Aghoro jyotishya ad

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು 1525, ದಕ್ಷಿಣಕನ್ನಡ 196, ಧಾರವಾಡ 129, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 63, ಬೀದರ್ 62, ರಾಯಚೂರು 48, ಉಡುಪಿ 43, ಮೈಸೂರು 42, ಶಿವಮೊಗ್ಗ 42, ಚಿಕ್ಕಬಳ್ಳಾಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20, ಬೆಂಗಳೂರು ಗ್ರಾಮಾಂತರ 19, ಕೊಡಗು 15, ಗದಗ 14, ಚಾಮರಾಜನಗರ 13, ಉತ್ತರಕನ್ನಡ 12, ಹಾವೇರಿ 12, ಚಿಕ್ಕಮಗಳೂರು 10, ಬಾಗಲಕೋಟೆ 7, ಮಂಡ್ಯ 4, ರಾಮನಗರ 3, ಬೆಳಗಾವಿ 2 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here