ಬೆಂಗಳೂರು: ರಾಜ್ಯದಲ್ಲಿ ಎರಡು ತಿಂಗಳ ಬಳಿಕ ಅತೀ ಕಡಿಮೆ ಅಂದರೆ 2,576 ಪ್ರಕರಣ ಪತ್ತೆಯಾಗಿದೆ. ಇದಲ್ಲದೆ ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಇದರಿಂದಾಗಿ ಸದ್ಯಕ್ಕಂತೂ ರಾಜ್ಯ ಕೊರೋನಾ ಸೋಂಕಿನಿಂದ ಸುಧಾರಿಸಿಕೊಳ್ಳುತ್ತಿದೆ ಎಂದು ಹೇಳಬಹುದು.
ಇಂದು 2,576 ಪ್ರಕರಣ ಪತ್ತೆಯಾಗಿದ್ದರೆ, ಇದನ್ನೂ ಸೇರಿಸಿ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಪತ್ತೆಯಾದ ಪ್ರಕರಣಗಳ ಸಂಖ್ಯೆ 8,29,640 ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಂದು ಒಂದೇ ಒಂದೇ ದಿನದಲ್ಲಿ 29 ಜನರು ಕೊರೋನಾ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ.
ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನ ಕೊರೋನಾ ಅಂಖ್ಯೆ ಸಂಖ್ಯೆಗಳನ್ನು ನೋಡುವುದಾದರೆ ರಾಜ್ಯದಲ್ಲಿಯೇ ಅತಿ ಹೆಚ್ಚು 1,439 ಮಂದಿಗೆ ಇಂದು ಸೋಂಕು ತಗುಲಿದೆ. ಇದರೊಂದಿಗೆ 5,925 ಜನರು ಸೋಂಕಿನಿಂದ ಗುಣವಾಗಿದ್ದಾರೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ 8,29,640 ಜನರಿಗೆ ಕೋವಿಡ್ -19 ಸೋಂಕು ತಗುಲಿದ್ದರೆ ಇವರಲ್ಲಿ 7,73,595 ಜನರು ಗುಣವಾಗಿ ಮನೆಗಳಿಗೆ ತೆರಳಿದ್ದಾರೆ. ಇನ್ನು 44,805 ಜನರಲ್ಲಿ ಮಾತ್ರ ಕೋವಿಡ್ ಸೋಂಕು ಸಕ್ರಿಯವಾಗಿದ್ದು ಅವರಿಗೆ ಅಗತ್ಯವಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.
ಇಂದಿನ 02/11/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@drashwathcn @LaxmanSavadi @GovindKarjol @mla_sudhakar @PuneethRajkumar @Ramesh_aravind @CovidIndiaSeva @iaspankajpandey @BBMPCOMM @BBMP_MAYOR @KarnatakaVarthe https://t.co/n3596pe4tU pic.twitter.com/KJYV28KOz0
— K’taka Health Dept (@DHFWKA) November 2, 2020