2798-new-covid-19-cases-reported-in-karnataka

ಬೆಂಗಳೂರು(ಜು.14): ರಾಜ್ಯದಲ್ಲಿ ಇಂದು 2496 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ ರಾಜ್ಯದಲ್ಲಿ 44,077 ಜನರಿಗೆ ಸೋಂಕು ತಗುಲಿದಂತಾಗಿದೆ. ಇದರೊಂದಿಗೆ 87 ಜನರು ಕೊರೊನಾ ಸೋಂಕಿನಿಂದ ಇಂದು ಜೀವ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದ ರಾಜಧಾನಿಯಲ್ಲಿ ಒಂದೇ ದಿನದಲ್ಲಿ 1267 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರು ಎಷ್ಟು ?

ರಾಜ್ಯದಲ್ಲಿ ಇಂದು ಗುಣಮುಖರಾದವರು ಎಷ್ಟು ಎಂದು ನೋಡುವುದಾದರೆ, ಇಂದು 1142 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 17,390 ಜನರು ಸೋಂಕಿನಿಂದ ಪಾರಾಗಿ ಮನೆ ಸೇರಿದ್ದಾರೆ. ಇನ್ನು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ 25,839 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು ?

ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು 1267, ಮೈಸೂರು 125, ಕಲಬುರಗಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರಕನ್ನಡ 64, ಬೆಳಗಾವಿ 64, ವಿಜಯಪುರ 52, ತುಮಕೂರು 47, ಬೀದರ್ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂಗಳೂರು ಗ್ರಾಮಾಂತರ 14, ಚಿಕ್ಕಬಳ್ಳಾಪುರ 13, ಕೋಲಾರ 11, ಶಿವಮೊಗ್ಗ 10, ಕೊಡಗು 10, ಚಿತ್ರದುರ್ಗ 10, ಗದಗ 9, ಚಾಮರಾಜನಗರ 8, ಹಾಸನ 4, ಚಿಕ್ಕಮಗಳೂರು 3, ಯಾದಗಿರಿ 2, ರಾಮನಗರ 1 ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.

ಇದನ್ನೂ ಓದಿರಿ:ಕೋವಿಡ್ ಸೋಂಕಿತನ ಶವ ಸಾಗಣೆ: ಡಾಕ್ಟರ್ ಕಾರ್ಯಕ್ಕೆ ಸೆಲ್ಯೂಟ್!

ಸಾವಿಗೀಡಾದ ಸೋಂಕಿತರು ಯಾವ ಯಾವ ಜಿಲ್ಲೆಯವರು ?

ಇಂದು ರಾಜ್ಯದಲ್ಲಿ 87 ಸೋಂಕಿತರು ಸಾವನ್ನಪ್ಪಿದ್ದಾರೆ. ಇವರ ಸಂಖ್ಯೆಯನ್ನು ಜಿಲ್ಲಾವಾರು ನೋಡುವುದಾದರೆ, ಬೆಂಗಳೂರು ನಗರ 56, ಬಳ್ಳಾರಿ 5, ಮೈಸೂರು 4,  ದಕ್ಷಿಣ ಕನ್ನಡ 4, ಬಾಗಲಕೋಟೆ 4, ವಿಜಯಪುರ 3, ರಾಯಚೂರು 2, ಚಿಕ್ಕಮಗಳೂರು 3, ಚಾಮರಾಜನಗರ 2, ಧಾರವಾಡ 1, ಕಲಬುರಗಿ 1, ದಾವಣಗೆರೆ 1, ಹಾಸನ 1 ಸಾವಾಗಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

LEAVE A REPLY

Please enter your comment!
Please enter your name here