213-new-corona-cases-found-in-karnataka

ಬೆಂಗಳೂರು ( ಜೂ.22): ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಇಂದು ಒಂದೇ ದಿನದಲ್ಲಿ 5 ಜನರನ್ನು ಬಲಿ ಪಡೆದಿದೆ. 249 ಇದಲ್ಲದೇ  ಜನರಿಗೆ ಕೋವಿಡ್-19 ರ ಸೋಂಕುಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 9399 ಕ್ಕೆ ಏರಿಕೆಯಾದಂತಾಗಿದೆ.

ಇಂದು ಕೋವಿಡ್-19 ಸೋಂಕಿಗೆ ಐವರು ಸಾವನ್ನಪ್ಪಿದ್ದು, ಬಳ್ಳಾರಿಯ 50 ವರ್ಷದ ಮಹಿಳೆ, ರಾಮನಗರದ 90 ವರ್ಷದ ವೃದ್ಧ, ಬೆಂಗಳೂರು ನಗರದ 45 ವರ್ಷದ ಯುವಕ, 38 ವರ್ಷದ ಯುವತಿ, 70 ವರ್ಷದ ವ್ಯಕ್ತಿ ಮೃತ ಪಟ್ಟವರಾಗಿದ್ದಾರೆ ಎಂದು ಆರೋಗ್ಯ ಇಲಾಕೆಯ ಬುಲೆಟಿನ್ ತಿಳಿಸಿದೆ.

ಇನ್ನು ಜಿಲ್ಲಾವಾರು ಸೋಂಕಿತರನ್ನು ನೋಡುವುದಾದರೆ ಬೆಂಗಳೂರು ನಗರ 126, ಕಲಬುರಗಿ 27, ವಿಜಯಪುರ 15, ಉಡುಪಿ 14, ದಕ್ಷಿಣ ಕನ್ನಡ 12, ದಾವಣಗೆರೆ 9, ಉತ್ತರ ಕನ್ನಡ 6, ಬಾಗಲಕೋಟೆ 6, ಬೀದರ್ 5, ಚಿಕ್ಕಮಂಗಳೂರು 5, ಧಾರವಾಡ 4, ಬೆಂಗಳೂರು ಗ್ರಾಮಾಂತರ 4, ರಾಮನಗರ 3, ಕೋಲಾರ 4, ಚಿತ್ರದುರ್ಗ 2, ತುಮಕೂರು 2, ಕೊಡಗು 2, ಯಾದಗಿರಿ 1, ಮೈಸೂರು 1, ಚಿಕ್ಕಬಳ್ಳಾಪುರ 1, ಗದಗ 1,  ಕೊಪ್ಪಳ 1 ಪ್ರಕರಣಗಳು ದಾಖಲಾಗಿವೆ.

ಇಂದು ಸೋಂಕಿನಿಂದ 111 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ ರಾಜ್ಯದಲ್ಲಿ 3523 ಜನರು ಸಕ್ರೀಯರಾಗಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. 80 ಜನರು ಐಸಿಯು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here