ಬೆಂಗಳೂರು (29 ಮೇ): ಕರ್ನಾಟಕ ಇಂದು ಕೊರೊನಾ ದಾಳಿಗೆ ಬೆಚ್ಚಿ ಬಿದ್ದಿದ್ದು, ಹೊಸದಾಗಿ 248 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ರಾಜ್ಯದ ಸೋಂಕಿತರ ಸಂಖ್ಯೆ 2781 ಕ್ಕೆ ಏರಿಕೆಯಾದಂತಾಗಿದೆ.
ಇಂದು ಬೆಳಗಿನಿಂದಲೂ ಸೋಂಕಿತರ ಪಟ್ಟಿಯಲ್ಲಿ ಏರಿಕೆ ಕಂಡು ಬಂದಿದ್ದು, ಸಂಜೆಯ ಆರೋಗ್ಯ ಇಲಾಖೆಯ ವರದಿಯನ್ನು ನೋಡಿ ಕರ್ನಾಟಕ ಬೆಚ್ಚಿ ಬಿದ್ದಿದೆ. ಒಟ್ಟಾರೆಯಾಗಿ ನಿನ್ನೆ 6 ಗಂಟೆಯಿಂದ ಇಂದಿನ 6 ಗಂಟೆಯ ವರೆಗೆ 248 ಹೊಸ ಪ್ರಕರಣಗಳು ಬೆಳಕಿಗೆ ಬಂದು ಇಡಿ ಕರ್ನಾಟಕ ಗಾಬರಿಗೊಳ್ಳುವಂತೆ ಮಾಡಿದೆ. ಇಂದು ರಾಯಚೂರಿನಲ್ಲಿ ಅತೀಹೆಚ್ಚು 62 ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಕಲಬುರಗಿ 61 ಮತ್ತು ಯಾದಗಿರಿ 60 ಪ್ರಕರಣಗಳು ದಾಖಲಾಗಿವೆ.
ಇಂದಿನ ಒಟ್ಟಾರೆ ಪ್ರಕರಣಗಳನ್ನು ಜಿಲ್ಲಾವಾರು ನೋಡುವುದಾದರೆ ರಾಯಚೂರು 62, ಕಲಬುರಗಿ 61, ಯಾದಗಿರಿ 60, ಉಡುಪಿ 15, ಬೆಂಗಳೂರು ನಗರ 12, ಬಳ್ಳಾರಿ 9, ಚಿಕ್ಕಬಳ್ಳಾಪುರ 5, ದಾವಣಗೆರೆ 4, ಹಾಸನ 4, ವಿಜಯಪುರ 4, ಮೈಸೂರು 2, ಮಂಡ್ಯ 2, ತುಮಕೂರು 2, ಚಿಕ್ಕಮಗಳೂರು 2, ಧಾರವಾಡ 1, ಚಿತ್ರದುರ್ಗ 1, ಶಿವಮೊಗ್ಗ 1, ಬೆಂಗಳೂರು ಗ್ರಾಮೀಣ 1 ಸೋಂಕಿತರು ಪತ್ತೆಯಾಗಿದ್ದಾರೆ.
ಕೋವಿಡ್19: 29 ಮೇ 2020 ರ ಸಂಜೆಯವರೆಗಿನ ಮಾಹಿತಿ
— CM of Karnataka (@CMofKarnataka) May 29, 2020
ಒಟ್ಟು ಪ್ರಕರಣಗಳು: 2781
ಮೃತಪಟ್ಟವರು: 48
ಗುಣಮುಖರಾದವರು: 894
ಹೊಸ ಪ್ರಕರಣಗಳು: 248
1/4 pic.twitter.com/ACzyrgUNon
ಇದರೊಂದಿಗೆ ಇಂದು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ 60 ಜನರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಬ್ಬರು ಈ ಸೋಂಕಿನಿಂದ ಚೇತರಿಸಿಕೊಳ್ಳಲಾಗದೆ ಕೊನೆಯುಸಿರೆಳೆದಿದ್ದರೆ, ಇಲ್ಲಿಯವರೆಗೆ ಕರ್ನಾಟಕದಲ್ಲಿ ಈ ಸೋಂಕಿನಿಂದಾಗಿ 48 ಜನರು ಮೃತಪಟ್ಟಂತಾಗಿದೆ.
ಕರ್ನಾಟಕ ರಾಜ್ಯವು ರೋಗತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ಹಾಗೂ ಸರ್ವೇಕ್ಷಣೆಯನ್ನು ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು ಬಲಪಡಿಸಿದೆ. ಇದರಿಂದಾಗಿ ರೋಗ ಹರಡುವಿಕೆ ಮತ್ತು ಮರಣ ಪ್ರಮಾಣ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.