216-new-coronavirus-cases-reported-in-karnataka-today

ಕೊರೊನಾ ಮಹಾ ಮಾರಿ ಇಂದು ದೊಡ್ಡ ಪ್ರಮಾಣದಲ್ಲಿ ಅಟ್ಟಹಾಸ ಮೆರೆದಿದ್ದು, ಒಂದೇ ದಿನಕ್ಕೆ 216 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 1959 ಪ್ರಕರಣಗಳು ಇಲ್ಲಿಯವರೆಗೆ ದಾಖಲಾದಂತಾಗಿದೆ.

ಇಂದು ಬೆಳಕಿಗೆ ಬಂದ ಹೆಚ್ಚಿನ ಪ್ರಕರಣಗಳು ಗುಜರಾತ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರಾಗಿದ್ದಾರೆ. ಮಧ್ಯಾಹ್ನ ನೀಡಲಾದ ವರದಿಯಲ್ಲಿ 196 ಪ್ರಕರಣಗಳು ಇದ್ದು, ಸಂಜೆ 5 ಗಂಟೆ ಸುಮಾರಿಗೆ ಮತ್ತೆ 20 ಪ್ರಕರಣಗಳು ವರದಿಯಾಗಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಇಂದು 216 ಪ್ರಕರಣಗಳು ದಾಖಲಾದರೆ, ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳು 1959 ಕ್ಕೆ ಏರಿಕೆಯಾಗಿದೆ.  

ಇಂದಿನ ಪ್ರಕರಣಗಳನ್ನು ರಾಜ್ಯವಾರು ನೋಡುವುದಾದರೆ,ಯಾದಗಿರಿ 72, ರಾಯಚೂರು 40, ಮಂಡ್ಯ 28, ಚಿಕ್ಕಬಳ್ಳಾಪುರ 26, ಗದಗ 15, ಧಾರವಾಡ 5, ಬೆಂಗಳೂರು 4, ಹಾಸನ 4, ಬೀದರ್ 3, ಬಳ್ಳಾರಿ 3, ದಾವಣಗೆರೆ 3, ಕೋಲಾರ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 2, ಕಲಬುರಗಿ, ಬೆಳಗಾವಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಲಿದ್ದು, ರಾಜ್ಯದಲ್ಲಿ 2000 ಗಡಿಯ ಹತ್ತಿರ ಬಂದು ನಿಂತಿದೆ. ಬೇರೆ ರಾಜ್ಯಗಳಲ್ಲಿ ವಾಸವಿರುವ ಕಾರ್ಮಿಕರಿಗೆ ಅವರ ಊರುಗಳಿಗೆ ತೆರೆಳಲು ಅವಕಾಶ ನೀಡಲಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಈಗ ದಾಖಲಾಗುತ್ತಿರುವ ಹೆಚ್ಚಿನ ಪ್ರಕರಣಗಳು ವಲಸೆ ಬಂದವರೇ ಆಗಿದ್ದು, ರಾಜ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. 

ಕೊರೊನಾ ಸೋಂಕಿತರ ವರದಿ 

ರಾಜ್ಯದಲ್ಲಿ ದಿನೇ ದಿನೆ ಸೋಂಕಿತ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದರ ನಡುವೆ ಇಂದು 11 ಜನರು ಕೊರೊನಾ ಮಹಾಮಾರಿಯಿಂದ ಆರೋಗ್ಯ ಹೊಂದಿ ಮನೆಗೆ ತೆರಳಿದ್ದಾರೆ. ಸದ್ಯ 13 ರೋಗಿಗಳು ಐಸಿಯು ಚಿಕಿತ್ಸೆಯನ್ನು ಪಡೆಯುತ್ತಿದ್ದು, ಬೇಸರ ಸಂಗತಿಯೆಂದರೆ 42 ರೋಗಿಗಳು ಇಲ್ಲಿಯವರೆಗೆ ಕೊರೊನಾ ಕಾರಣಗಳಿಂದ ಸಾವನ್ನಪ್ಪಿದ್ದಾರೆ.

 

LEAVE A REPLY

Please enter your comment!
Please enter your name here