ಬೆಂಗಳೂರು (ಜೂನ್ 15): ರಾಜ್ಯದಲ್ಲಿ ಕೊರೊನಾ ದಿನೆ ದಿನೆ ಹೆಚ್ಚಾಗುತ್ತಿದ್ದು, ಇಂದು ಹೊಸದಾಗಿ 213 ಕೊರೊನಾ ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ 7213 ಕ್ಕೆ ಏರಿಕೆಯಾದಂತಾಗಿದೆ.
ಇಂದು 180 ಜನರು ಕೊರೊನಾ ಮಹಾ ಮಾರಿಯ ವಿರುದ್ಧ ಹೋರಾಡಿ ಗೆದ್ದು, ಮನೆಗೆ ತೆರಳಿದ್ದಾರೆ. ಅಲ್ಲದೇ ಇಬ್ಬರು ಸಾವನ್ನಪ್ಪಿದ್ದು, ಬೆಂಗಳೂರಿನ 75 ವರ್ಷದ ವ್ಯಕ್ತಿ ಮತ್ತು ಧಾರವಾಡದ 65 ವರ್ಷದ ವ್ಯಕ್ತಿ ಎಂದು ಹೇಳಲಾಗಿದೆ.
ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಕಲಬುರಗಿ 48, ಬೆಂಗಳೂರು ನಗರ 35, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ 3, ಬಾಗಲಕೋಟೆ 3, ಶಿವಮೊಗ್ಗ 3, ಉಡುಪಿ 2, ಹಾವೇರಿ 2, ರಾಮನಗರ 2, ದಾವಣಗೆರೆ 1, ಹಾಸನ 1 ಪ್ರಕರಣಗಳು ದಾಖಲಾಗಿವೆ.
ಇಂದು 103 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ ಮತ್ತು 23 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದವರಿಗೆ ಸೋಂಕು ದೃಡಪಟ್ಟಿದೆ. ಇದರೊಂದಿಗೆ ತೀವ್ರ ನಿಗಾ ಘಟಕ 56 ಜನರನ್ನು ಇಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿದೆ.